ವೃತ್ತಿ ಜೀವನದಲ್ಲಿ ಹಲವು ಬಾರಿ ಗಾಯದ ಸಮಸ್ಯೆಯಿಂದ ಬಳಲಿದ ಬಾಲಿವುಡ್ ಸ್ಟಾರ್ ಗಳ ಪೈಕಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಮಂಡಿ ನೋವಿನ ಹಿನ್ನೆಲೆಯಲ್ಲಿ ಶಾರುಖ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗಾಗ ಭುಜದ ನೋವು ಕೂಡ ಶಾರುಖ್ ಗೆ ಕಾಡ್ತಾ ಇದೆ.ಈ ಹಿಂದೆ ಕಿಂಗ್ ಖಾನ್ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ರು. ಈಗ ಮತ್ತೊಮ್ಮೆ ಸರ್ಜರಿಗೆ ಒಳಗಾಗಿದ್ದಾರೆ. ಈ ಹಿಂದೆ ಮಾಡಲಾದ ಶಸ್ತ್ರಚಿಕಿತ್ಸೆಯ ಫಾಲೋ ಅಪ್ ಆಗಿ ಮತ್ತೆ ಚಿಕ್ಕದೊಂದು ಆಪರೇಷನ್ ಗೆ ಒಳಗಾಗಿದ್ದೇನೆ ಅಂತಾ ಶಾರುಖ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇತ್ತೀಚೆಗೆ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ಬಾದ್ ಷಾ ಭುಜದ ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯೂಸಿಕ್ ವಿಡಿಯೋ ಶೂಟಿಂಗ್ ವೇಳೆ ಕೂಡ ಶಾರುಖ್ ಗೆ ನೋವಿನಿಂದಾಗಿ ಸಮಸ್ಯೆಯಾಗಿತ್ತು.ಹಾಗಾಗಿ ಮತ್ತೊಮ್ಮೆ ಸರ್ಜರಿ ಮಾಡಿಸಿಕೊಂಡಿದ್ದಾರೆ.
No comments:
Post a Comment