Friday, 3 February 2017

7 ಲಕ್ಷ ಮಂದಿಗೆ ವಂಚನೆ ಮಾಡಿ ₹3,700 ಕೋಟಿ ಲಪಟಾಯಿಸಿದ ಕಂಪನಿ!

7 ಲಕ್ಷ ಮಂದಿಗೆ ವಂಚನೆ ಮಾಡಿ ₹3,700 ಕೋಟಿ ಲಪಟಾಯಿಸಿದ ಕಂಪನಿ!






ನೋಯ್ಡಾ: ಆನ್‍ಲೈನ್ ವ್ಯವಹಾರಗಳ ವೆಬ್‍ಸೈಟ್ ಮೂಲಕ 7 ಲಕ್ಷ ಮಂದಿಗೆ ಮೋಸ ಮಾಡಿ ₹3,700 ಕೋಟಿ ವಂಚನೆ ಮಾಡಿದ ಕಂಪನಿಯೊಂದರ ಕಪಟ ಜಾಲವನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಭೇದಿಸಿದೆ.
ಪ್ರಸ್ತುತ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ₹500 ಕೋಟಿ ಹಣವಿದ್ದು, ಈ ಬ್ಯಾಂಕ್ ಖಾತೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ವಿಶೇಷ ಕಾರ್ಯ ಪಡೆಯ ಎಎಸ್‍ಪಿ ಅಮಿತ್ ಪಾಠಕ್ ಹೇಳಿದ್ದಾರೆ.
ಡಿಜಿಟಲ್ ಮಾರ್ಕೆಟಿಂಗ್ ಸಲ್ಯೂಷನ್ ನೀಡುವುದಾಗಿ ನಂಬಿಸಿ ಈ ಕಂಪನಿ 7 ಲಕ್ಷ ಮಂದಿಗೆ ಮೋಸ ಮಾಡಿತ್ತು.
ಪೋಂಜಿ ಸ್ಕೀಮ್ (ಬಡ್ಡಿಯ ಆಸೆ ತೋರಿಸಿ,ಅಪಾರ ಹಣ ಸಂಗ್ರಹಿಸುವ ಜಾಲ) ಅಡಿಯಲ್ಲಿ ಆನ್‍ಲೈನ್ ವ್ಯವಹಾರವನ್ನು ಈ ಕಂಪನಿ ಮಾಡಿತ್ತು.
ಅಂದಹಾಗೆ ಪೋಂಜಿ ಸ್ಕೀಮ್‍ ಮೂಲಕ ಆನ್‍ಲೈನ್ ವ್ಯವಹಾರ ಮಾಡಿ ಮೋಸ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಈ ವಂಚನಾ ಜಾಲದ ವ್ಯಕ್ತಿಗಳು ಕಂಪನಿಗಳಿಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಲೈಕ್ ಗಳಿಸುವುದು ಹೇಗೆ? ಎಂಬುದರ ಬಗ್ಗೆ ಆಸೆ ಹುಟ್ಟಿಸಿ ಹಣ ಲಪಟಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕ ಅಭಿನವ್ ಮಿತ್ತಲ್ ಮತ್ತು ಆತನ ಗೆಳೆಯರಾದ ಶ್ರೀಧರ್ ಮತ್ತು ಮಹೇಶ್ ಎಂಬವರನ್ನು ಬಂಧಿಸಲಾಗಿದೆ.

No comments:

Post a Comment

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...