9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ
http://adskpak.com/?type=2&id=sunildalavai&sid=38718
ಬೆಂಗಳೂರು,ಫೆ.2- ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಇಂದಿನಿಂದ ಫೆ.9ರವರೆಗೆ ಆಯೋಜಿಸಲಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ನಡೆಯಲಿರುವ ಸಿನಿಮೋತ್ಸವದ ಉದ್ಘಾಟನಾ ಸಮಾರಂಭ ಇಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಿರುವ ವಿಶೇಷ ವೇದಿಕೆಯಲ್ಲಿ ಕನ್ನಡ ಚಿತ್ರೋದ್ಯಮದ ಇತಿಹಾಸ, ಕಲೆ, ಸಂಸ್ಕøತಿಯ ಭವ್ಯ ದೃಶ್ಯಾವಳಿಗಳ ವಿಡಿಯೋ ಮ್ಯಾಪಿಂಗ್ ಹಿನ್ನೆಲೆಯಲ್ಲಿ ಸಂಪನ್ನಗೊಂಡಿದೆ . ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಇಂದು ಅಲ್ಗೇರಿಯಾದ ಮೊಹಮ್ಮದ್ ಅಮೀದಿ ನಿರ್ದೇಶನದ ಲಾ ವಚೆ ಚಿತ್ರ ಪ್ರದರ್ಶನಗೊಳ್ಳುತ್ತಿದೆ.
http://adskpak.com/?type=2&id=sunildalavai&sid=38718
ಅದ್ಧೂರಿ ಕಾರ್ಯಕ್ರಮದೊಂದಿಗೆ ವಿಶಿಷ್ಟ ವೇದಿಕೆಯಲ್ಲಿ ಸಿನಿಮೋತ್ಸವ ಆರಂಭಗೊಳ್ಳುತ್ತಿದ್ದು , ಈ ಕಾರ್ಯಕ್ರಮ ಖ್ಯಾತ ಚಲನಚಿತ್ರ ಕಲಾವಿದರಾದ ರಮೇಶ್ ಅರವಿಂದ್ ಹಾಗೂ ಸುಹಾಸಿನಿ ಸಂಯೋಜನೆಯೊಂದಿಗೆ ನಡೆಯುತ್ತಿರುವುದು ಮತ್ತೊಂದು ವಿಶೇಷ.
http://adskpak.com/?type=2&id=sunildalavai&sid=38718
http://adskpak.com/?type=2&id=sunildalavai&sid=38718
http://adskpak.com/?type=2&id=sunildalavai&sid=38718
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಭಿವೃದ್ದಿ ಸಚಿವ ರೋಷನ್ ಬೇಗ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವರಾದ ಕೆ.ಜೆ.ಜಾರ್ಜ್, ಉಮಾಶ್ರೀ, ಎಚ್.ಸಿ.ಮಹದೇವಪ್ಪ , ಪ್ರಿಯಾಂಕ್ ಖರ್ಗೆ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಈಶ್ವರಪ್ಪ , ಸಂಸದ ಪಿ.ಸಿ. ಮೋಹನ್, ಮೇಯರ್ ಪದ್ಮಾವತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಭಾಗವಹಿಸಲಿದ್ದಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ರಿಜಿಸ್ಟ್ರಾರ್ ಎಚ್.ಬಿ.ದಿನೇಶ್, ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಪಾಲ್ಗೊಳ್ಳುವರು.
ಇದೇ ಮೊದಲ ಬಾರಿಗೆ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಿರುವ ವೇದಿಕೆ ಹಾಗೂ ಪಿಲ್ಲರ್‍ಗಳ ಮೇಲೆ ವಿಡಿಯೋ ಮ್ಯಾಪಿಂಗ್ ಮಾಡಲಾಗುವುದು. ಟೀಸರ್ ಟೆಕ್ ಎಂಬ ಸಂಸ್ಥೆ ಈ ಜವಾಬ್ದಾರಿ ವಹಿಸಿ ಕೊಂಡಿದ್ದು, ಚಲನಚಿತ್ರರಂಗ ಬೆಳೆದು ಬಂದ ಹಾದಿ, ಇತಿಹಾಸ, ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಇನ್ನಿತರ ವಿಶೇಷತೆಗಳ ಬಗ್ಗೆ ಲೇಸರ್ ಚಿತ್ರಣವನ್ನು ಪ್ರದರ್ಶಿಸಲಾಗುತ್ತಿದೆ. ಮೆಕ್ಸಿಕೋ, ಇರಾನ್, ಸ್ವೀಡನ್, ರಷ್ಯಾ, ಚಿಲಿ, ಜರ್ಮನಿ ಸೇರಿದಂತೆ ಹಲವು ದೇಶಗಳ ಖ್ಯಾತ ನಿರ್ದೇಶಕರ ಚಲನಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಬೆಂಗಳೂರಿನ ಓರಾಯಿನ್ ಮಾಲ್‍ನ 11 ಸ್ಕ್ರೀನ್‍ಗಳಲ್ಲಿ ಮತ್ತು ಮೈಸೂರಿನ ಐನಾಕ್ಸ್ ನಾಲ್ಕು ಸ್ಕ್ರೀನ್‍ಗಳಲ್ಲಿ 240 ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ಜೊತೆಗೆ ಕನ್ನಡದ 12 ಚಿತ್ರಗಳು ಅದರಲ್ಲಿ 5 ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
http://adskpak.com/?type=2&id=sunildalavai&sid=38718
ಇದೇ ಮೊದಲ ಬಾರಿಗೆ ಜನಪ್ರಿಯ ಚಿತ್ರಗಳಾದ ಶಿವರಾಜ್‍ಕುಮಾರ್ ಅಭಿನಯದ ಶಿವಲಿಂಗ, ಸುದೀಪ್ ನಟಿಸಿರುವ ಕೋಟಿಗೊಬ್ಬ -2, ಪುನೀತ್ ರಾಜ್‍ಕುಮಾರ್ ನಟನೆಯ ದೊಡ್ಮನೆ ಹುಡುಗ, ದರ್ಶನ್ ಅಭಿನಯಿಸಿರುವ ಜಗ್ಗು ದಾದ, ಗಣೇಶ್ ಅಭಿನಯದ ಮತ್ತೆ ಮುಂಗಾರು ಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಚಲನಚಿತ್ರರಂಗದ ಹಿರಿಯ ನಟಿ ಹರಿಣಿಯವರ ಪುನರಾವಲೋಕನ, ಕಲಾವಿದರ ಕುರಿತ ಮಾಹಿತಿ, ಚಲನಚಿತ್ರ ಕ್ಷೇತ್ರದ ಮೈಲಿಗಲ್ಲು , ನಿಧನರಾದ ಕಲಾವಿದರ ಸ್ಮರಣೆ ಜೊತೆಗೆ ಇದೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕರ 25 ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವುದರಿಂದ ಇದೊಂದು ಸ್ತ್ರೀ ಶಕ್ತಿ ಉತ್ಸವವಾಗಿಯೂ ಕಂಗೊಳಿಸಲಿದೆ. ಚಿತ್ರ ನಿರ್ಮಾಣ, ಮಾರ್ಕೆಟಿಂಗ್ ಕುರಿತ ವಿಶೇಷ ಚರ್ಚೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತ ವಿ.ಕೆ.ಮೂರ್ತಿ ಕುರಿತ ಉಪನ್ಯಾಸ ನಡೆಯಲಿದ್ದು, ಅಂತಾರಾಷ್ಟ್ರೀಯ ವಿಮರ್ಶಕರು ತೀರ್ಪುಗಾರರಿಗೆ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
http://adskpak.com/?type=2&id=sunildalavai&sid=38718
http://adskpak.com/?type=2&id=sunildalavai&sid=38718
No comments:
Post a Comment