Thursday, 2 February 2017

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಒಂದಿಷ್ಟು ಸರಳ ಟಿಪ್ಸ್


ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಒಂದಿಷ್ಟು ಸರಳ ಟಿಪ್ಸ್ 

ದೇಹದ ಯಾವುದೇ ಅಂಗಕ್ಕಿಂತಲೂ ಮೆದುಳಿಗೆ ಅತಿ ಹೆಚ್ಚಿನ ಆರೈಕೆಯ ಅಗತ್ಯವಿದೆ. ಮೆದುಳಿನ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಮ್ಮ ಜೀವನಕ್ರಮ ಮೊದಲಾಗಿ ಆರೋಗ್ಯಕರವಾಗಿರಬೇಕು. ನಮ್ಮ ಆಹಾರ ಪೌಷ್ಟಿಕವಾಗಿರಬೇಕು ಹಾಗೂ ಸಾಕಷ್ಟು ವ್ಯಾಯಾಮವೂ ಲಭಿಸಬೇಕು...ಕಂಪ್ಯೂಟರ್ ಉಪಯೋಗಿಸುವ ಎಲ್ಲರಿಗೂ ಇದರಲಿರುವ ಸಿಪಿಯು ಅಥವಾ ಕೇಂದ್ರ ಸಂಸ್ಕರಣಾ ಘಟದಕ ಬಗ್ಗೆ ತಿಳಿದೇ ಇರುತ್ತದೆ. ಈ ಕಂಪ್ಯೂಟರ್ ಇಷ್ಟೊಂದು ವೇಗವಾಗಿ ಕಾರ್ಯನಿರ್ವಹಿಸಲು ಈ ಸಿಪಿಯು ಎಷ್ಟು ಅಗತ್ಯ, ಇದಿಲ್ಲದಿದ್ದರೆ ಕಂಪ್ಯೂಟರ್ ಒಂದು ಕೇವಲ ಡಬ್ಬಿಯಾಗಿ ಕುಳಿತುಕೊಳ್ಳುತ್ತಿತ್ತು. ಇದೇ ರೀತಿ ಮಾನವದೇಹದಲ್ಲಿ ಮೆದುಳು ಈ ಸಿಪಿಯು ನಂತೆಯೇ ಕೆಲಸ ನಿರ್ವಹಿಸುತ್ತದೆ. ಏಕೆಂದರೆ ಮೆದುಳಿನಿಂದ ಹೊರಟ ಸಂಕೇತಗಳ ಮೂಲಕ ದೇಹದ ಸಕಲ ಕಾರ್ಯಗಳು ಸಾಧ್ಯವಾಗುತ್ತವೆ.  ಮೆದುಳಿನ ಶಕ್ತಿಯನ್ನೇ ಕುಗ್ಗಿಸುವ ಆಹಾರಗಳಿವು! ಯಾವುದಕ್ಕೂ ಎಚ್ಚರ... ಮೆದುಳು ನಮ್ಮ ದೇಹತ ಅತ್ಯಂತ ಮುಖ್ಯ ಅಂಗವಾಗಿದ್ದು ಇದರ ಕಾರ್ಯನಿರ್ವಹಣೆಗೆ ಅತಿ ಹೆಚ್ಚಿನ ಪ್ರಮಾಣದ ರಕ್ತಸಂಚಾರದ ಅಗತ್ಯವಿದೆ. ಇದೇ ಕಾರಣಕ್ಕೆ ಮೆದುಳಿಗೆ ಅತಿ ಹೆಚ್ಚಿನ ರಕ್ತ ಸರಬರಾಜಾಗುತ್ತದೆ. ಒಂದು ವೇಳೆ ಮೆದುಳು ಕಾರ್ಯನಿರ್ವಹಿಸುವುದನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಿದರೂ ಇದು ದೇಹದ ಇತರ ಅಂಗಗಳ ಮೇಲೆ ಭಾರೀ ಪ್ರಭಾವ ಬೀರುತ್ತದೆ, ಇದರ ಪರಿಣಾಮ ಗಂಭೀರ ಸ್ವರೂಪದ್ದೂ ಆಗಬಹುದು.  ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ ಆದ್ದರಿಂದ ದೇಹದ ಯಾವುದೇ ಅಂಗಕ್ಕಿಂತಲೂ ಮೆದುಳಿಗೆ ಅತಿ ಹೆಚ್ಚಿನ ಆರೈಕೆಯ ಅಗತ್ಯವಿದೆ. ಮೆದುಳಿನ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಮ್ಮ ಜೀವನಕ್ರಮ ಮೊದಲಾಗಿ ಆರೋಗ್ಯಕರವಾಗಿರಬೇಕು. ನಮ್ಮ ಆಹಾರ ಪೌಷ್ಟಿಕವಾಗಿರಬೇಕು ಹಾಗೂ ಸಾಕಷ್ಟು ವ್ಯಾಯಾಮವೂ ಲಭಿಸಬೇಕು. ಬನ್ನಿ, ಮೆದುಳಿನ ಆರೋಗ್ಯಕ್ಕಾಗಿ ಯಾವ ರೀತಿಯಲ್ಲಿ ನಮ್ಮ ಜೀವನವನ್ನು ಬದಲಿಸಿಕೊಳ್ಳಬೇಕು ಎಂಬುದನ್ನು ನೋಡೋಣ....   ಸಲಹೆ # 1 ಕೆಂಪು ಮಾಂಸವನ್ನು ಕಡಿಮೆ ಮಾಡಿ ಮೆದುಳು ಚುರುಕಾಗಿರಬೇಕು ಎಂದರೆ ಕೆಂಪು ಮಾಂಸವನ್ನು ಆದಷ್ಟು ಕಡಿಮೆ ಮಾಡಿ. ಏಕೆಂದರೆ ಇದರಲ್ಲಿ ಅತಿ ಹೆಚ್ಚು ಸಂತುಲಿತ ಕೊಬ್ಬು ಮೆದುಳಿನ ಜೀವಕೋಶಗಳ ಕ್ಷಮತೆಯನ್ನು ಉಡುಗಿಸಿ ಮರೆಗುಳಿತನ ಅಥವಾ ಆಲ್ಜೀಮರ್ಸ್ ಕಾಯಿಲೆಗೆ ಕಾರಣವಾಗಬಹುದು. ಸಲಹೆ #2 ಡೈರಿ ಉತ್ಪನ್ನಗಳನ್ನೂ ಕಡಿಮೆ ಮಾಡಿ ಡೈರಿ ಉತ್ಪನ್ನಗಳಾದ ಹಾಲು, ಮೊಸರು ಇತ್ಯಾದಿಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಸಂತುಲಿತ ಕೊಬ್ಬು ಇದ್ದು ಇವೂ ಮೆದುಳಿನ ಕ್ಷಮತೆಯನ್ನು ಉಡುಗಿಸಿ ಚಿಂತನಾ ಶಕ್ತಿಯನ್ನು ಕುಂದಿಸುತ್ತವೆ. ಸಲಹೆ #3 ಗ್ಲುಟೆನ್ ಇಲ್ಲದ ಆಹಾರ ಸೇವಿಸಿ ಗೋಧಿ, ಮೈದಾ ಮೊದಲಾದ ಆಹಾರಗಳಲ್ಲಿ ಗ್ಲುಟೆನ್ ಅಂಶವಿದ್ದು ಇವು ಸಹಾ, ಕೆಲವೊಮ್ಮೆ ಮೆದುಳಿನಲ್ಲಿರುವ ರಾಸಾಯನಿಕಗಳನ್ನು ಏರುಪೇರುಗೊಳಿಸಲು ಕಾರಣವಾಗುತ್ತವೆ. ಇದು ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಕಾರಣವಾಗುತ್ತವೆ. ಸಲಹೆ #4 ನಿಮ್ಮ ಊಟ ಚಿಕ್ಕ ಪ್ರಮಾಣದಲ್ಲಿರಲಿ ಒಂದೇ ಸಮಯಕ್ಕೆ ಭಾರೀ ಪ್ರಮಾಣದ ಊಟ ಮಾಡುವ ಬದಲು ದಿನದಲ್ಲಿ ಕೆಲವಾರು ಬಾರಿ ಚಿಕ್ಕ ಚಿಕ್ಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿ. ಈ ಅಭ್ಯಾಸದಿಂದ ಸತತವಾಗಿ ಮೆದುಳಿಗೆ ಪೋಷಕಾಂಶಗಳು ಲಭ್ಯವಾಗುತ್ತಾ ಸಕ್ಕರೆಯನ್ನು ನಿಯಂತ್ರಿಸುತ್ತಾ ಮೆದುಳಿಗೆ ಸತತವಾಗಿ ಪೋಷಣೆ ನೀಡಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಸಲಹೆ #5 ಹೆಚ್ಚು ಹಣ್ಣು ತರಕಾರಿಗಳನ್ನು ತಿನ್ನಿ ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ತರಕಾರಿ ಮತ್ತು ಹಣ್ಣುಗಳಿರಲಿ. ಇದರಿಂದ ಹೆಚ್ಚಿನ ಪ್ರಮಾಣದ ನಾರು, ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತವೆ ಹಾಗೂ ತನ್ಮೂಲಕ ಮೆದುಳಿನೆ ಜೀವಕೋಶಗಳಿಗೆ ಚೈತನ್ಯ ಒದಗಿಸುತ್ತದೆ. ಸಲಹೆ #6 ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಸಿ ಇತರ ಎಣ್ಣೆಗಳ ಬದಲಿಗೆ ಕೊಬ್ಬರಿ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಬಳಸಿ ಅಡುಗೆ ಮಾಡಿ. ಇದರಿಂದ ಸಂತುಲಿತ ಕೊಬ್ಬು ಕಡಿಮೆಯಾಗುತ್ತದೆ ಹಾಗೂ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಇವು ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತವೆ.
http://adskpak.com/?type=2&id=sunildalavai&sid=38718


No comments:

Post a Comment

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...