Friday, 3 February 2017

'ಕಿರಿಕ್' ಸಂಕಲನಕಾರನ ಮನದಾಳದ ಮಾತುಗಳು'

'ಕಿರಿಕ್' ಸಂಕಲನಕಾರನ ಮನದಾಳದ ಮಾತುಗಳು'





1.ಸಿನಿಮಾಗಳ ಹಿಂದೆ ನಿಂತು ಮ್ಯಾಜಿಕ್ ಮಾಡೋರು ನೀವು. ನಿಮ್ಮ ಸಿನಿಪಯಣದ ಬಗ್ಗೆ ಹೇಳಿ ಸಚಿನ್ ಅವರೇ?
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನನ್ನ ಮೊದಲ ಸಿನಿಮಾ. ನನಗೆ ನಿರ್ದೇಶಕ ಆಗ್ಬೇಕು ಅನ್ನೋ ಕನಸಿತ್ತು. ಆದರೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ್ಸ ಮಾಡೋ ಆವಕಾಶ ಸಿಕ್ಕಿರ್ಲಿಲ್ಲ ಹಾಗಾಗಿ ಒಬ್ಬ ಟೆಕ್ನಿಷಿಯನ್ ಆಗಿ ಬಂದೆ. ಸಿನಿಮಾ ಇಂಡಸ್ಟ್ರಿಗೆ ಬರೋ ಮುಂಚೆ ನನ್ನ ದೊಡ್ಡಪ್ಪನ ಮೂಲಕ ಕೆಲವು ಜನ ಎಡಿಟರ್ಗಳನ್ನು ಮೀಟ್ ಮಾಡಿದೆ ಆದರೆ ಯಾರೂ ಸಪೋರ್ಟ್ ಮಾಡಿಲ್ಲ. ಎಲ್ಲರೂ ಇಂಡಸ್ಟ್ರಿ ಬಗ್ಗೆ ಕೆಟ್ಟದಾಗೇ ಮಾತಾಡಿದ್ರು. ನನಗೆ ಅವರ ಮಾತುಗಳು ಇಷ್ಟ ಆಗಿಲ್ಲ, ಅದಕ್ಕಾಗಿ ಯಾರತ್ರನೂ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ಬಾರ್ದು ಅಂತ ಡಿಸೈಡ್ ಮಾಡಿದೆ. ಮನೆಯಲ್ಲಿ ಕೂತು ಆನ್ಲೈನ್ನಲ್ಲಿ ಎಡಿಟಿಂಗ್ ಕಲಿತೆ. ಆ ಟೈಂನಲ್ಲಿ ಸುನಿಯವ್ರು ನನ್ನ ಮೇಲೆ ಭರವಸೆಯಿಟ್ಟು ಅವಕಾಶ ಕೊಟ್ರು.
http://adskpak.com/?type=2&id=sunildalavai&sid=38718
ಸಿನಿಮಾ ಮಾಡೋ ಮುಂಚೆ ಸುನಿಯವರು ಪ್ರೋಮೊ ಶೂಟ್ ಮಾಡಿದ್ರು ಅದನ್ನು ನಾನೇ ಎಡಿಟ್ ಮಾಡಿದ್ದೆ ಅದು ಸಕ್ಸಸ್ ಆಗ್ತಿದ್ದಂಗೆ ಪೂರ್ತಿ ಸಿನಿಮಾಕ್ಕೆ ಎಡಿಟಿಂಗ್ ಜೊತೆಗೆ ಕಲರ್ ಗ್ರೇಡಿಂಗ್ ಮತ್ತು 'ಬಾನಲಿ ಬದಲಾಗುವ...' ಹಾಡಿಗೆ ಸಣ್ಣಪುಟ್ಟ ವಿಷ್ಯುವಲ್ ಎಫೆಕ್ಟ್ಸ್ ಟ್ರೈ ಮಾಡಿದ್ದೆ. ಅದು ತುಂಬಾನೇ ಹಿಟ್ ಆಯ್ತು. ಆಮೇಲೆ ಎಡಿಟರ್ ಆಗಿ ಕೆಲವೊಂದು ಸಿನಿಮಾಗಳನ್ನು ಮಾಡಿದೆ. ಇಲ್ಲಿವರೆಗೆ ಫ್ರೆಂಡ್ಸ್ ಸರ್ಕಲ್ನಲ್ಲೇ ಎಡಿಟರ್ ಆಗಿ ಮಾಡ್ಬೇಕು ಅಂತ ಮಾಡ್ದೆ. ಹಾಗಾಗಿ ಬೇರೆ ಬ್ಯಾನರ್ ಸಿನಿಮಾಗಳನ್ನು ಒಪ್ಲಿಲ್ಲ. ಕಿರಿಕ್ ಪಾರ್ಟಿ ನನ್ನ ಏಳನೇ ಸಿನಿಮಾ.

2.ಸಂಕಲನಕಾರನಾಗಿ ನಿಮಗೆ ಎದುರಾದ ಸವಾಲುಗಳೇನು?
ಸಿಂಪಲ್ಲಾಗ್ ಪ್ರೋಮೊ ನನ್ನ ಮೊದಲ ಕೆಲಸ, ತುಂಬಾ ಇನ್ನೋಸೆಂಟ್ ಆಗಿ ಕೆಲ್ಸ ಮಾಡಿದ್ದೆ, ಭಯ ಇರ್ಲಿಲ್ಲ. ಅದು ಸಕ್ಸಸ್ ಆಗ್ತಿದ್ದಂಗೆ ಜೋಶ್ ನಲ್ಲಿ ಪೂರ್ತಿ ಸಿನಿಮಾನೂ ಎಡಿಟ್ ಮಾಡಿದೆ. ಮುಂದೆ ನನಗೆ ಛಾಲೆಂಜಿಂಗ್ ಅಂತ ಅನ್ಸಿದ್ದು ಬಹುಪರಾಕ್, ಉಳಿದವರು ಕಂಡಂತೆ ಸಿನಿಮಾಗಳನ್ನು ಮಾಡುವಾಗ. ಇವುಗಳು ನಾನ್-ಲೀನಿಯರ್ ಸಿನಿಮಾಗಳಾಗಿದ್ರಿಂದ ಸ್ಕ್ರಿಪ್ಟ್ ಅನ್ನು ಕರೆಕ್ಟಾಗಿ ಕನ್ವೇ ಮಾಡ್ಬೇಕಾಗಿತ್ತು. ರಕ್ಷಿತ್ ಮತ್ತು ಸುನಿಯವರು ಕಂಪ್ಲೀಟ್ ಫ್ರೀಡಂ ಕೊಟ್ಟಿದ್ರಿಂದ ನನಗೆ ಹೆಲ್ಪ್ ಆಯ್ತು.

3.ನೀವು ಸಂಕಲನ ಮಾಡಿರೋ ಸಿನಿಮಾಗಳೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡಿವೆ. ಪ್ರತಿಯೊಂದು ಸಿನಿಮಾದಲ್ಲೂ ಹೊಸತನ್ನು ಕೊಡಲು ನಿಮಗೆ ಹೇಗೆ ಸಾಧ್ಯ ಆಯ್ತು?
ಹೊಸತನ ಅನ್ನೋದು ನಾನು ಕೊಟ್ಟ್ಟಿರೋದಲ್ಲ. ಅದಕ್ಕೆ ಇಡೀ ತಂಡ ಕಾರಣ. ಹೊಸತನವಿರುವ, ಹೊಸತಾಗಿ ಯೊಚ್ನೆ ಮಾಡೋ ನಿರ್ದೇಶಕರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ. ಹೊಸತನದ ಕ್ರೆಡಿಟ್ಸ್ ಏನೇ ಇದ್ರೂ ಅದು ಡೈರೆಕ್ಟರ್ಸ್ಗೆ ಹೋಗ್ಬೇಕು.

4.ಸಂಕಲನದ ಜೊತೆಯಲ್ಲಿ ಕಲರಿಂಗ್, ವಿಎಫ್‌ಎಕ್ಸ್ ನೀವೇ ಮಾಡ್ತೀರಾ ಕಷ್ಟ ಅನಿಸಲ್ವಾ?
ನನಗೆ ವಿಷ್ಯುವಲ್ ಎಫೆಕ್ಟ್ಸ್ ಅಂದ್ರೆ ತುಂಬಾ ಇಷ್ಟ. ವಿಷ್ಯುವಲ್ ಎಫೆಕ್ಟ್ಸ್ ಇರುವಂತಹ ಸಿನಿಮಾಗಳನ್ನು ಮಾಡ್ಬೇಕು ಅಂತಲೇ ನಾನು ಇಂಡಸ್ಟ್ರಿಗೆ ಬಂದಿರೋದು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿನಲ್ಲಿ ವಿಷ್ಯುವಲ್ ಎಫೆಕ್ಟ್ಸ್ ಸಣ್ಣದಾಗಿ ಟ್ರೈ ಮಾಡಿದ್ದೆ. ಸುಮ್ನೆ ಟ್ರೈ ಮಾಡೋಣ ಅಂತ ಮಾಡಿದ್ದೆ. ಅಲ್ಲಿ ಸುನಿ ಫ್ರೀಡಂ ಕೊಟ್ರು. ಹಾಗೇ ಕಲರಿಂಗ್ ಕೂಡ ನನಗೆ ತುಂಬಾ ಇಷ್ಟ. ನಾನು ಕಲರ್ ಥಿಯರಿ ಬಗ್ಗೆ ಓದಿದ್ದೆ. ಕಲರಿಂಗ್ ಕೂಡ ಇಷ್ಯುವಲ್ ಎಫೆಕ್ಟ್ಸ್ನ ಒಂದು ಭಾಗ ಅಂತ ಹೇಳ್ಬಹುದು. ಎಡಿಟಿಂಗ್, ಕಲರಿಂಗ್ ಮತ್ತು ವಿಎಫ್‌ಎಕ್ಸ್ ಪೋಸ್ಟ್ ಪ್ರೊಡಕ್ಷನ್ನಲ್ಲಿ ಒಂದೇ ಸಮಯದಲ್ಲಿ ನಡೆಯೋ ಕೆಲಸಗಳಾಗಿದ್ರಿಂದ ಒತ್ತಡ ಜಾಸ್ತಿ ಇರುತ್ತೆ. ನಾನು ಅಸಿಸ್ಟೆಂಟ್ಗಳನ್ನು ಯೂಸ್ ಮಾಡೋದಿಲ್ಲ. ನಾನು ಮಾಡಿದ ಸಿನಿಮಾಗಳ ನಿರ್ದೇಶಕರು ಟೈಂ ಕೊಟ್ಟಿದ್ರಿಂದ ಚೆನ್ನಾಗಿ ಮಾಡಲು ಸಾಧ್ಯ ಆಯ್ತು.

5.ಸಂಕಲನಕಾರನಾಗಿ ನಿಮಗೆ ಡಿಮ್ಯಾಂಡ್ ಇರುವಾಗಲೇ ನಿರ್ದೇಶನಕ್ಕೆ ಇಳಿದಿದ್ದೀರಾ, ಏನ್ ವಿಷ್ಯಾ?
ನಾನು ನಿರ್ದೇಶಕ ಆಗುವ ಕನಸನ್ನು ಇಟ್ಟುಕೊಂಡು ಬಂದವನು. ನಾನು ಮಾಡೋ ಸಿನಿಮಾನ ಎಡಿಟ್ ಮಾಡ್ಬೇಕು ಅಂತಾನೇ ಎಡಿಟಿಂಗ್ ಕಲ್ತಿರೋದು. ಎಡಿಟಿಂಗ್ನಲ್ಲಿ ತುಂಬಾನೇ ಅವಕಾಶಗಳು ಬರ್ತಿವೆ, ಆದ್ರೆ ನಾನು ಮೊದಲೇ ಡಿಸೈಡ್ ಮಾಡಿದ್ದೆ. 4-5 ವರ್ಷಗಳಲ್ಲಿ ನಾನೊಂದು ಸಿನಿಮಾ ನಿರ್ದೇಶನ ಮಾಡ್ಬೇಕು ಅಂತ. ಆ ಟೈಂ ಇವಾಗ ಬಂದಿದೆ. ಇದು ಸರಿಯಾದ ಸಮಯ ಅಂತ ಅನಿಸ್ತಿದೆ.

6.ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಶುರು? ತಂಡದ ಬಗ್ಗೆ ಸ್ವಲ್ಪ ಹೇಳಿ.
ಪೂರ್ವ ತಯಾರಿಗಳು ನಡೆಯ್ತಿವೆ. ಸ್ಕ್ರಿಪ್ಟ್ ಫೈನಲ್ ಸ್ಟೇಜ್ಗೆ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಅನೌನ್ಸ್ ಮಾಡ್ತೀವಿ. ಟೀಂ ಬಗ್ಗೆ ಹೇಳ್ಬೇಕು ಅಂದ್ರೆ ರಕ್ಷಿತ್ ಅವರು ಹೀರೋ, ಮತ್ತು ಸಾನ್ವಿ ಶ್ರೀವಾತ್ಸವ್ ಹೀರೋಯಿನ್. ಚರಣ್ರಾಜ್ ಮ್ಯೂಸಿಕ್, ಮನೋಹರ್ ಜೋಶಿ ಅವರು ಛಾಯಾಗ್ರಹಣ ಮಾಡ್ತಿದ್ದಾರೆ. ಉಳಿದ ಡೀಟೇಲ್ಸ್ ಸ್ವಲ್ಪ ದಿನದಲ್ಲೇ ಕೊಡ್ತೇನೆ.

7.ನಿಮ್ಮ ಸಿನಿಮಾದಲ್ಲಿ ಹೊಸದಾಗಿ ಏನನ್ನು ಹೇಳಲು ಹೊರಟಿದ್ದೀರಾ?
ಪ್ರತಿಯೊಬ್ಬ ನಿರ್ದೇಶಕನಿಗೂ ತನ್ನ ಮೊದಲ ಸಿನಿಮಾದಲ್ಲಿ ಹೊಸದಾಗಿ ಏನೋ ಹೇಳ್ಬೇಕು ಅನ್ನೋ ಆಸೆ ಇರುತ್ತೆ. ಹಾಗೇ ನನಗೂ ಕೂಡ. ನಾನು ಮಾಡೋ ಸಿನಿಮಾ ಡಿಫರೆಂಟ್ ಫಿಲ್ಮ್ ಅಂತ ಹೇಳಲ್ಲ ಬಟ್ ಖಂಡಿತವಾಗಿಯೂ ಇದು ರೆಗ್ಯುಲರ್ ಸಿನಿಮಾ ಅಂತ ಆಗಿರಲ್ಲ. ನಿರೂಪಣೆಯಲ್ಲಿ ಹೊಸತನವಿದೆ. ವಿಷ್ಯವಲ್ಸ್ ಚೆನ್ನಾಗಿ ಇರುತ್ತೆ. ಟೆಕ್ನಿಕಲಿ ರಿಚ್ ಮತ್ತು ಸ್ಟ್ರಾಂಗ್ ಆಗಿರುತ್ತೆ ಸಿನಿಮಾ. ಕಥೆ ಸಿಂಪಲ್, ಆದರೆ ಹೇಳೋ ರೀತಿಯಲ್ಲಿ ಹೊಸತನವಿರುತ್ತೆ. ಇದೊಂದು ಮ್ಯೂಸಿಕಲ್ ಫಿಲ್ಮ್ ಅಂತ ಹೇಳ್ಬಹುದು. ವಿಷ್ಯುವಲ್ಸ್ ಮತ್ತು ಮ್ಯೂಸಿಕ್ನಲ್ಲಿ ಹೊಸ ಪ್ರಯೋಗ ಮಾಡ್ಬೇಕು ಅಂತ ಇದ್ದೇವೆ.



No comments:

Post a Comment

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...