ಒಂದು ಕಡೆ ಬಿಸಿಲ ಬೇಗೆ. ಇನ್ನೊಂದು ಕಡೆ ಜನ ತಣ್ಣಗಿನ ಜಾಗದ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ. ಕೆಲವರು ಕೂಲರ್‌ಗೆ ಮೊರೆಹೋಗುತ್ತಿದ್ದರೆ ಇನ್ನೂ ಕೆಲವರು ಎಸಿಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ನಿಮಗೆ ಗೊತ್ತೇ..? ಪ್ರಕೃತಿ ಸಹಜವಾದ ವಾತಾವರಣ ಅಲ್ಲದೆ ಕೃತಕವಾಗಿ ಸೃಷ್ಟಿಸಿದ ತಣ್ಣಗಿನ ವಾತಾವರಣದಲ್ಲಿದ್ದರೆ ಅದರಿಂದ ನಮಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಾಗಂತ ನಾವು ಹೇಳುತ್ತಿಲ್ಲ, ವೈದ್ಯರು ಹೇಳುತ್ತಿದ್ದಾರೆ. ನಿತ್ಯ ಎಸಿ ಕಾರು, ರೂಮುಗಳಲ್ಲಿರುವವರು ಕಡ್ಡಾಯವಾಗಿ ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಅವು..

1. ಸಹಜವಾದ ವಾತಾವರಣದಲ್ಲಿ ದೇಹ ಭರಿಸಬಹುದಾದ ಉಷ್ಣತೆಯಲ್ಲಿ ಬದುಕುವುದು ಜೀವರಾಶಿಗಳಿಗೆಲ್ಲಾ ಪ್ರಕೃತಿ ಪರವಾದ ರಕ್ಷಣೆ ಸಿಗುತ್ತದೆ. ಆದರೆ ಪ್ರಕೃತಿ ವಿರುದ್ಧವಾದ ಪದ್ದತಿಗಳಲ್ಲಿ ಕೃತಕ ತಂಪಿಗಾಗಿ ನಾವು ಇಡುವ ಪ್ರತಿಹೆಜ್ಜೆ ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಿದ್ದಾರೆ ತಜ್ಞರು. ಅದೇ ಕೆಲಸವಾಗಿ ಎಸಿಯಲ್ಲಿ ಕೂತು ಕೆಲಸ ಮಾಡಿದರೆ ಕೆಲಸ ಮುಗಿಯುವ ವೇಳೆಗೆ ಭರಿಸಲಾಗದ ತಲೆನೋವು, ನಿಶ್ಯಕ್ತಿಯಂತಹ ಲಕ್ಷಣಗಳು ಕಾಣಿಸುತ್ತವೆ.
2. ತಣ್ಣಗಿನ ವಾತಾವರಣದಲ್ಲಿ ಸ್ನಾಯುಗಳಿಗೆ ಸಾಕಷ್ಟು ರಕ್ತಸಂಚಲನ ನಡೆಯದ ಕಾರಣ ಸುಸ್ತಾಗುತ್ತದೆ.
3.ಒಣಚರ್ಮ ಇರುವವರು ಎಸಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಇನ್ನಷ್ಟು ಒಣಗುತ್ತದೆ. ಈ ರೀತಿಯ ಲಕ್ಷಣಗಳು ಕಾಣಿಸಿದರೆ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.
4. ದೀರ್ಘಕಾಲಿಕ ಸಮಸ್ಯೆಗಳು ಎಂದರೆ…ಆರ್ಥರೈಟಿಸ್, ನ್ಯೂರೈಟಿಸ್‌ನಂತಹ ಕಾಯಿಲೆಗಳಿರುವವರಿಗೆ ಆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವರಲ್ಲಿ ಈ ನ್ಯೂರೈಟಿಸ್ ಕಾರಣ ನಿಶ್ಯಕ್ತಿ ಉಂಟಾಗುವ ಸಾಧ್ಯತೆಗಳೂ ಹೆಚ್ಚು.

5. ಈ ಹಿಂದೆ ಬಿಸಿ ವಾತಾವರಣದಲ್ಲಿ ಇರುವವರು ನಿತ್ಯ ಎಸಿಯಲ್ಲಿ ಇರುವುದನ್ನು ಅಭ್ಯಾಸವಾದವರು ಇನ್ನು ಯಾವುದೇ ರೀತಿಯಲ್ಲೂ ಅವರು ಬಿಸಿಯನ್ನು ಭರಿಸಲಾಗಲ್ಲ. ಸುಲಭವಾಗಿ ಸೂರ್ಯಾಘಾತಕ್ಕೆ ಒಳಗಾಗುತ್ತಾರೆ.
6. ಬಹಳ ಸಮಯ ಎಸಿ ಕಾರಿನಲ್ಲಿ, ಮುಚ್ಚಿದ ಡೋರ್ ಕಾರಣ ಅಲ್ಲಿ ಸೂಕ್ಷ್ಮ ಜೀವಿಗಳು ಅಲ್ಲೇ ಸುತ್ತುತ್ತಿರುತ್ತವೆ. ಸುಲಭವಾಗಿ ಶ್ವಾಸ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಸೋಂಕು ಸಹ ಬರುವ ಸಾಧ್ಯತೆಗಳಿವೆ.
7. ನಿತ್ಯ ಎಸಿಯಲ್ಲಿ ಇರುವವರು ಕಡ್ಡಾಯವಾಗಿ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಹೊತ್ತು ಹೊರಗೆ ಬಂದು ಸಹಜ ವಾತಾವರಣದಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಹೋಗಬೇಕು. ಆ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಏನಾಗುವುದಿಲ್ಲ.
No comments:
Post a Comment