ನೀವು ಆರೋಗ್ಯವಾಗಿದ್ದೀರೋ ಇಲ್ವೋ ಅನ್ನೋದನ್ನು ಇಷ್ಟುದಿನ ವೈದ್ಯರು ಹೇಳ್ತಾ ಇದ್ರು. ಆದ್ರೆ ಇನ್ಮೇಲೆ ಡಾಕ್ಟರ್ ಗಳ ಆ ಕೆಲಸವನ್ನು ಕೇವಲ ಒಂದು ಯಂತ್ರ ಮಾಡಲಿದೆ. ಮನುಷ್ಯನ ಉಸಿರಾಟವನ್ನು ಗಮನಿಸಿ, ವಾಸನೆಯನ್ನು ಗಮನಿಸಿ ಆತ ಆರೋಗ್ಯವಾಗಿದ್ದಾನೋ ಇಲ್ಲವೋ ಅನ್ನೋದನ್ನು ಈ ಮಷಿನ್ ಹೇಳಲಿದೆ. ಅಷ್ಟೇ ಅಲ್ಲ ನಿಮಗೆ ಯಾವ ಖಾಯಿಲೆ ಇದೆ ಅನ್ನೋದನ್ನು ಕೂಡ ಈ ಯಂತ್ರವೇ ಹೇಳುತ್ತದೆ.ಈ ಮಷಿನ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ರಕ್ತ ಸಂಬಂಧಿ ಖಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ, ಮೂತ್ರಕ್ಕೆ ಸಂಬಂಧಿಸಿದ ರೋಗಗಳನ್ನು ಸುಲಭವಾಗಿ ಈ ಯಂತ್ರದ ಮೂಲಕ ಪತ್ತೆ ಮಾಡಬಹುದು. ಪ್ರತಿಯೊಬ್ಬ ಮನುಷ್ಯದ ದೇಹದಿಂದ್ಲೂ ಬೇರೆ ಬೇರೆ ತೆರನಾದ ವಾಸನೆ ಹೊರಹೊಮ್ಮುತ್ತದೆ.ಅವರ ವಯಸ್ಸು, ಮೆಟಬಾಲಿಕ್ ಪ್ರಕ್ರಿಯೆ, ಜೆನೆಟಿಕ್ಸ್, ಜೀವನ ಶೈಲಿಗೆ ತಕ್ಕಂತೆ ಶರೀರದ ಗಂಧವೂ ಬೇರೆಯಾಗಿರುತ್ತದೆ. ಅದೇ ರೀತಿ ಈ ಯಂತ್ರ ಕೂಡ ಮನುಷ್ಯನ ಚರ್ಮ ಮತ್ತು ಉಸಿರಿನ ವಾಸನೆಯ ಆಧಾರದ ಮೇಲೆ ಖಾಯಿಲೆಯನ್ನು ಪತ್ತೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.ಉದಾಹರಣೆಗೆ ಮಧುಮೇಹ ರೋಗ ಹೊಂದಿರುವವರ ವಾಸನೆ ಸೇಬುಹಣ್ಣಿನಂತಿದ್ರೆ, ಟೈಫಾಯಿಡ್ ನಿಂದ ಬಳಲುತ್ತಿರುವವರಿಂದ ಬೇಕಿಂಗ್ ಬ್ರೆಡ್ ನಂತಹ ಗಂಧ ಹೊರಹೊಮ್ಮುತ್ತದೆ. ಈ ವಾಸನೆಯಿಂದ್ಲೇ ರೋಗವನ್ನು ಪತ್ತೆ ಮಾಡಬಲ್ಲ ಸೆನ್ಸಾರ್ ಒಂದನ್ನು ಯಂತ್ರದಲ್ಲಿ ಅಳವಡಿಸಲಾಗಿದೆ.
No comments:
Post a Comment