Thursday, 4 May 2017

ಆಧಾರ್ ಕಾರ್ಡು ನಕಲಿ ವೆಬ್‌ಸೈಟ್‍ಗಳು ಇವು….ಎಚ್ಚರ ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ..!















ಆಧಾರ್… ಒಂದು ಕಾಲದಲ್ಲಿ ಕೇವಲ ಗ್ಯಾಸ್ ಸಬ್ಸಿಡಿಗಾಗಿ ಮಾತ್ರ ಇದನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ. ಬಹಳಷ್ಟು ಕೆಲಸಗಳಿಗೆ ಆಧಾರ್ ಬೇಕೇಬೇಕು. ಇನ್ನೂ ಹೇಳಬೇಕೆಂದರೆ ಇಂದು ಶ್ರೀಸಾಮಾನ್ಯರಿಗೆ ಸರಕಾರ ನೀಡುತ್ತಿರುವ ಹಲವು ಯೋಜನೆಗಳ ಫಲಾನುಭವಿಗಳಾಗಬೇಕಾದರೆ ಆಧಾರ್ ಕಡ್ಡಾಯವಾಗಿ ಬೇಕು. ಆದರೆ ಆಧಾರ್ ಕಾರ್ಡ್ ಮಾಡಿಸದವರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈಗವರು ಕಾರ್ಡ್ ಮಾಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅವರಷ್ಟೇ ಅಲ್ಲದೆ, ಈಗಾಗಲೆ ಆಧಾರ್ ಕಾರ್ಡ್ ಉಳ್ಳವರು ಅಪ್‍ಡೇಟ್ ಮಾಡಿಕೊಳ್ಳಲು ಸುಲಭವಾಗಿರುತ್ತದೆಂದು ಆನ್‌ಲೈನ್‌ಗೆ ಮೊರೆಹೋಗುತ್ತಿದ್ದಾರೆ. ಇದನ್ನೇ ಅವಕಾಶವಾಗಿ ತೆಗೆದುಕೊಂಡ ಕೆಲವರು ಆಧಾರ್ ಕಾರ್ಡುಗಳಿಗೆ ಏಕಾಏಕಿ ನಕಲಿ ಸೈಟ್‌ಗಳನ್ನು ಏರ್ಪಾಟು ಮಾಡಿ ಶ್ರೀಸಾಮಾನ್ಯರನ್ನು ಮೋಸ ಮಾಡುತ್ತಿದ್ದಾರೆ.
aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, duplicateaadharcard.com. ನೋಡಿದರಲ್ಲವೇ ಎಷ್ಟೆಲ್ಲಾ ನಕಲಿ ಆಧಾರ್ ಸೈಟ್‌ಗಳಿವೆ ಎಂದು. ಈ ಸೈಟ್‌ಗಳು ಆಧಾರ್ ಕಾರ್ಡನ್ನು ಕೊಡಿಸುತ್ತೇವೆಂದು, ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡುತ್ತೇವೆಂದು ಹೇಳಿ ಜನರನ್ನು ಮೋಸ ಮಾಡುತ್ತಿವೆ. ಮೋಸ ಹೋದವರು ಪ್ರಕರಣ ದಾಖಲಿಸಿದ ಕಾರಣ ಪೊಲೀಸರು ಆ ವೆಬ್‌ಸೈಟ್‍ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅವುಗಳನ್ನು ನಿರ್ವಹಿಸುತ್ತಿದ್ದವರನ್ನೂ ಅರೆಸ್ಟ್ ಮಾಡಿದ್ದಾರೆ.
ಯಾರಾದರೂ ಆಧಾರ್ ಕಾರ್ಡು ನೋಂದಾಯಿಸಿಕೊಳ್ಳಬೇಕಾದರೆ ಸಮೀಪದ ಆಧಾರ್ ಕೇಂದ್ರ ಅಥವಾ ಸರಕಾರಿ ಕಚೇರಿಗೆ ಹೋಗಬೇಕು. ಅವರು ಆಧಾರ್ ಕೇಂದ್ರ ಎಲ್ಲಿದೆ ಎಂಬ ವಿವರಗಳನ್ನು ನೀಡುತ್ತಾರೆ. ಇಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಆದ www.uidai.gov.in ಗೆ ಭೇಟಿ ನೀಡಿದರೆ, ಆಧಾರ್ ಗೆ ನೋಂದಾಯಿಸಿಕೊಳ್ಳಬಹುದು. ಈಗಾಗಲೆ ಆಧಾರ್ ಉಳ್ಳವರು ತಮ್ಮ ವಿವರಗಳನ್ನು ಈ ಸೈಟ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಆದರೆ ನಕಲಿ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಡಿ. ಇಲ್ಲದಿದರೆ ಎಷ್ಟೋ ಅಮೂಲ್ಯವಾದ ನಿಮ್ಮ ಮಾಹಿತಿ ದುಷ್ಟರ ಕೈಸೇರುತ್ತದೆ. ಆ ಬಳಿಕ ನೊಂದು ಪ್ರಯೋಜನವಿಲ್ಲ.

No comments:

Post a Comment

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...