Thursday, 4 May 2017

ವ್ಯಾಯಾಮ ಮಾಡುವವರು ಸಡನ್ ಆಗಿ ನಿಲ್ಲಿಸಿದರೆ…ದಪ್ಪ ಆಗುತ್ತಾರಾ? ಇದರಲ್ಲಿ ನಿಜವೆಷ್ಟು??



ಪ್ರತಿ ವ್ಯಕ್ತಿಗೂ ಪೌಷ್ಠಿಕ ಆಹಾರ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಎಷ್ಟು ಮುಖ್ಯವೋ ಆರೋಗ್ಯವಾಗಿರಬೇಕಾದರೆ ನಿತ್ಯ ವ್ಯಾಯಾಮ ಮಾಡುವುದು ಅಷ್ಟೇ ಮುಖ್ಯ. ದಪ್ಪ ಇರುವವರು ಸಣ್ಣ ಆಗಲು ವ್ಯಾಯಾಮ ಮಾಡುವುದು, ಸುಂದರವಾದ ಆಕಾರಕ್ಕೆ ಮರಳುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೂ ಆರೋಗ್ಯದ ದೃಷ್ಟಿಯಿಂದ ಇದೆಲ್ಲಾ ಮಾಡಲೇಬೇಕು. ಎಷ್ಟೋ ವರ್ಷಗಳಿಂದ ವ್ಯಾಯಾಮ ಮಾಡುತ್ತಾ ಬಂದಿರುವವರು ಸಡನ್ ಆಗಿ ಅದನ್ನು ನಿಲ್ಲಿಸಿದರೆ..? ಆಗ ಏನೆಲ್ಲಾ ಪರಿಣಾಮಗಳಾಗುತ್ತವೆ ಗೊತ್ತಾ? ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿರುವವರು ಅದನ್ನು ಸಡನ್ ಆಗಿ ಬಿಟ್ಟರೆ ಏನಾಗುತ್ತದೆ? ಈಗಾಗಲೆ ವ್ಯಾಯಾಮ ಮಾಡಿದ ದೇಹವೇ ಅಲ್ಲವೇ? ಅದನ್ನು ನಿಲ್ಲಿಸಿದರೂ ಏನಾಗುತ್ತದೆ. ಏನೂ ಆಗಲ್ಲ…ಎಂದುಕೊಳ್ಳುತ್ತಿದ್ದೀರಾ? ಆದರದು ತಪ್ಪು. ಯಾಕೆಂದರೆ ವ್ಯಾಯಾಮ ಮಾಡದೇ ಇರುವವರಷ್ಟೇ ಅಲ್ಲ, ಈಗಾಗಲೆ ಎಷ್ಟೋ ದಿನಗಳಿಂದ ವ್ಯಾಯಾಮ ಮಾಡುತ್ತಿರುವವರು ಸಹ ಅದನ್ನು ನಿಲ್ಲಿಸಿದರೆ ಆಗ ಇಬ್ಬರಿಗೂ ಒಂದೇ ರೀತಿಯ ಪರಿಣಾಮಗಳಾಗುತ್ತವೆ. ಅವೇನೆಂದರೆ..
1. ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿದ್ದರೂ ಒಮ್ಮೆಲೆ ಅದನ್ನು ನಿಲ್ಲಿಸಿದರೆ…ಹಾಗೆಯೇ ಕನಿಷ್ಟ 3-4 ವಾರಗಳ ಕಾಲ ಮುಂದುವರೆದರೆ ಆಗ ಆ ರೀತಿಯ ವ್ಯಕ್ತಿಗಳ ದೇಹದಲ್ಲಿ ಏನಾಗುತ್ತದೆಂದರೆ….ಮೊದಲು ಅವರ ಎಜರ್ಜಿ ಲೆವೆಲ್ ಕಡಿಮೆಯಾಗುತ್ತದೆ. ಮುಂಚಿನಂತೆ ಫಿಟ್ ಆಗಿರಲ್ಲ. ಶಕ್ತಿ ಕಡಿಮೆಯಾಗುತ್ತದೆ.
2. ವ್ಯಾಯಾಮ ನಿಲ್ಲಿಸಿದರೆ ಸ್ವಲ್ಪ ಸಮಯಕ್ಕೆ ದಪ್ಪ ಆಗುತ್ತಾರೆ. ಮುಖ್ಯವಾಗಿ ಹೊಟ್ಟೆ ಬೆಳೆಯುತ್ತದೆ. ಹಾಗಂತ ನಾವು ಹೇಳುತ್ತಿಲ್ಲ. ವೈದ್ಯರು ಹೇಳುತ್ತಿದ್ದಾರೆ. ವ್ಯಾಯಾಮ ಮಾಡುವವರು ಅದನ್ನು ಸಡನ್ ಆಗಿ ನಿಲ್ಲಿಸಿದರೆ ಆಗ ಶಕ್ತಿ ಮಾಂಸಖಂಡಗಳಿಗೆ ತಲುಪದೆ ಅದು ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ. ಇದರಿಂದ ಮೊದಲು ಹೊಟ್ಟೆ ಬೆಳೆಯುತ್ತದೆ.
3. ಹೃದಯ ಬಡಿದುಕೊಳ್ಳುವುದು, ಅದರ ಕೆಲಸದಲ್ಲೂ ಗಣನೀಯ ಬದಲಾವಣೆಗಳಾಗುತ್ತವೆ. ವ್ಯಾಯಾಮ ಮಾಡುತ್ತಿದ್ದಾಗ, ಮಾಡದಿದ್ದಾಗ ಹೃದಯದ ಕೆಲಸದಲ್ಲಿ ಬದಲಾವಣೆ ಬರುತ್ತಿರುತ್ತದಂತೆ.
4. ವ್ಯಾಯಾಮ ನಿಲ್ಲಿಸಿದ 12 ವಾರಗಳಿಗೆ ಫಿಟ್‌ನೆಸ್ ಇರುವುದೇ ಇಲ್ಲ. ಫಿಟ್‌ನೆಸ್ ಲೆವೆಲ್ಸ್ ಸಾಮಾನ್ಯ ಸ್ಥಿತಿಗೆ ಬರುತ್ತವೆ. ಇದರಿಂದ ಅಷ್ಟು ದಿನ ವ್ಯಾಯಾಮ ಮಾಡಿದ್ದು ವ್ಯರ್ಥವಾಗುತ್ತದಂತೆ.
5. ವ್ಯಾಯಾಮ ಮಾಡುವಾಗ ಮೆಟಬಾಲಿಸಂ ಚೆನ್ನಾಗಿದ್ದ ಕಾರಣ ಎಷ್ಟು ತಿಂದರು, ಏನು ತಿಂದರೂ ಅದು ಹಾಗೆಯೇ ಜೀರ್ಣವಾಗುತ್ತದೆ. ಆದರೆ ವ್ಯಾಯಾಮ ನಿಲ್ಲಿಸಿದರೆ ತಿಂಡಿ ಹೆಚ್ಚಾಗಿ ತಿನ್ನೋಣ ಎಂದರೆ ಸಾಧ್ಯವಾಗಲ್ಲ. ಒಂದು ವೇಳೆ ತಿಂದರೆ ದಪ್ಪ ಆಗುವುದಷ್ಟೇ ಅಲ್ಲ, ತೂಕ ಕೂಡ ಹೆಚ್ಚಾಗುತ್ತದೆ.
6. ವ್ಯಾಯಾಮ ಮಾಡುವಾಗ ಸರಿಯಾಗಿರುವ ಬಿಪಿ ಲೆವೆಲ್ಸ್ ಅದನ್ನು ಬಿಟ್ಟಾಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಬಿಪಿ ಲೆವೆಲ್ಸ್ ನಿಯಂತ್ರಣದಲ್ಲಿರಲ್ಲವಂತೆ. ಸಾಮಾನ್ಯ ವ್ಯಕ್ತಿಗಳ ಬಿಪಿ ಲೆವೆಲ್ಸ್ ಮಾದರಿಯಲ್ಲಿರುತ್ತವಂತೆ.
7. ವ್ಯಾಯಾಮ ಮಾಡಿದ ಸಮಯದಲ್ಲಿ ಹೆಚ್ಚಿನ ದೂರ ಓಡುವ ಸಾಮರ್ಥ್ಯ ಇರುವವರು ಸಹ ಅದನ್ನು ಬಿಟ್ಟಾಗ ಸ್ವಲ್ಪ ದೂರ ನಡೆದರೂ ಬಳಲುತ್ತಾರೆ.
8. ದಿನಗಟ್ಟಲೆ ಮಾಡುತ್ತಿರುವ ವ್ಯಾಯಾಮವನ್ನು ಒಂದೇ ಸಲ ನಿಲ್ಲಿಸಿದರೆ ಅದರಿಂದ ಮಿದುಳಿನ ಕೆಲಸದಲ್ಲೂ ಬದಲಾವಣೆ ಆಗುತ್ತದಂತೆ. ಮಿದುಳು ಚುರುಕಾಗಿ ಕೆಲಸ ಮಾಡಲ್ಲವಂತೆ.
9. ಇನ್ನು ಕೊನೆಯದಾಗಿ ಸ್ನಾಯುಗಳು. ವ್ಯಾಯಾಮ ಮಾಡುವಾಗ ಉತ್ತಮ ಆಕಾರದಲ್ಲಿರುವ ಸ್ನಾಯುಗಳು ವ್ಯಾಯಾಮ ಬಿಟ್ಟಾಗ ಆಕಾರ ಕಳೆದುಕೊಳ್ಳುತ್ತವೆ. ಅವು ಮತ್ತೆ ಮುಂಚಿನ ಶೇಪ್‌ಗೆ ಬರುವುದು ಸ್ವಲ್ಪ ಕಷ್ಟಕರವಾಗುತ್ತದೆ.


No comments:

Post a Comment

Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...