ಹುಡುಗಿಯರೇ ಹಾಗೇ ಅನಿಸುತ್ತದೆ. ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಹೆಂಗಸರ ಮನಸ್ಸು ತಿಳಿಯುವುದು ಕಷ್ಟ ಎಂಬ ಮಾತು ನಿಜವೆನಿಸುತ್ತದೆ. ತಪ್ಪು ಎಂದು ಗೊತ್ತಿದ್ದರೂ ಅದನ್ನು ಖಂಡಿಸುವ ಭಂಡ ಧೈರ್ಯ. ಯಾವುದೇ ಸಂದರ್ಭದಲ್ಲಿಯೂ ತಮ್ಮ ಹಠ ಗೆಲ್ಲಬೇಕು ಎಂಬ ಮನೋಭಾವ. ಅದರಲ್ಲಿಯೂ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಯುವತಿಯರು ಸಾರ್ವಜನಿಕವಾಗಿ ಒಪ್ಪುವುದಿಲ್ಲ. ಇದು ಸಮೀಕ್ಷೆಯಲ್ಲಿ ವ್ಯಕ್ತವಾದ ಸತ್ಯ.
- ಹುಡುಗಿಯರಿಗೆ ಬಟ್ಟೆ ಆರಿಸುವುದು ಸುಲಭದ ಮಾತಲ್ಲ. ಕೊನೆಯಲ್ಲಿ ಎರಡು ಬಟ್ಟೆ ಆರಿಸಿ ಇದಾ ಅದಾ ಎನ್ನುತ್ತಿರುತ್ತಾರೆ. ಅನೇಕ ವೇಳೆ ಈ ರೀತಿ ಆಗಬಾರದು ಎಂದು ಕೊಂಡರು ಹಾಗೇ ಆಗುತ್ತದೆ.
- ಹುಡುಗರ ಸ್ವಚ್ಛತೆ ಬಗ್ಗೆ ಕಾಮೆಂಟ್ ಮಾಡುವ ಹುಡುಗಿಯರು, ಎಷ್ಟೋ ವೇಳೆ ಕೈ ತೊಳೆಯದೇ ಊಟಕ್ಕೆ ಕೂರುತ್ತಾರೆ. ಹುಡುಗರ ಬೇಜವಾಬ್ದಾರಿ, ಸ್ವಚ್ಛತೆ ಬಗ್ಗೆ ಹೇಳುವವರು, ಹೆಚ್ಚು ಬಾರಿ ಇದರ ಗಮನ ನೀಡುವುದಿಲ್ಲ.
- ಹುಡುಗಿಯರು ತುಂಬಾ ದುಃಖದಿಂದ ಅಳುತ್ತಿದ್ದರೂ ಕನ್ನಡಿ ನೋಡುವುದನ್ನು ಮರೆಯುವುದಿಲ್ಲ. ಅಳುವಾಗ ತಾನು ಹೇಗೆ ಕಾಣಿಸುತ್ತೇನೆ ಎಂಬುದನ್ನು ನೋಡಿಕೊಳ್ತಾರೆ. ಎಷ್ಟೋ ವೇಳೆ ಅಳುಮುಂಜಿ ಮುಖದಲ್ಲಿಯೇ ಸೆಲ್ಫಿ ತೆಗೆದುಕೊಳ್ಳುತ್ತಾರೆ.
- ಹುಡುಗಿಯರಿಗೆ ತುಂಬಾ ಸೌಂದರ್ಯ ಪ್ರಜ್ಞೆ ಎಂದು ನಂಬಿದ್ದರೆ ಅದು ತಪ್ಪು. ಹುಡುಗಿಯರು ತುಂಬಾ ಅವಶ್ಯಕತೆ ಇದ್ದಾಗ ಮಾತ್ರ ವ್ಯಾಕ್ಸಿಂಗ್ ಮಾಡುತ್ತಾರೆ. ಬಟ್ಟೆ ಕೂಡ ಅಷ್ಟೇ, ತೊಡುವಾಗ ಮಾತ್ರ ಅದಕ್ಕೆ ಐರನ್ ಮಾಡಬೇಕು ಎಂದು ನೆನಪಾಗುತ್ತದೆಯಂತೆ.
- ವಿಚಿತ್ರ ಎನಿಸಿದರು ನಿಜ ಎನ್ನುವ ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಮೂಗಿನಲ್ಲಿ ಬೆರಳಾಡಿಸುವುದು. ಸಾರ್ವಜನಿಕವಾಗಿ ಯಾರೂ ತಮ್ಮನ್ನು ನೋಡುತ್ತಿಲ್ಲ ಎಂಬ ಖಾತ್ರಿ ಅವರಿಗಿದ್ದರೆ, ಮೂಗಿಗೆ ಬೆರಳಾಗಿ ತಿರುವುತಾರಂತೆ.
- ವಾದ ಮಾಡುವಲ್ಲಿ ಹೆಂಗಳೆಯರದು ಎತ್ತಿದ ಕೈ. ಅದರಲ್ಲಿಯೂ ಎದುರಾಳಿ ಶತ್ರು ಆಗಿದ್ದರೆ, ಅದರಲ್ಲಿ ಮೂಗು ತೂರಿಸಿ ಹಾದಿ ರಂಪ, ಬೀದಿ ರಂಪ ಮಾಡುವುದು ಖಂಡಿತ.
- ಭಾವನಾತ್ಮಕವಾಗಿ ಹುಡುಗಿಯರು ತುಂಬಾ ಸೆನ್ಸಿಟಿವ್. ಅದರಲ್ಲಿಯೂ ಅವರ ಪ್ರೀತಿ ಪಾತ್ರರ ಸಂದೇಶ ಅವರ ಇನ್ ಬಾಕ್ಸ್ ನಲ್ಲಿದ್ದರೆ ದಿನಕ್ಕೆ ಕನಿಷ್ಟ ಎಂದರೂ 10 ಬಾರಿ ಓದುತ್ತಾರಂತೆ.
No comments:
Post a Comment