Monday, 8 May 2017

ಇನ್ಮೇಲೆ ರೋಗ ಪತ್ತೆ ಮಾಡಲು ವೈದ್ಯರು ಬೇಕಾಗಿಲ್ಲ..!




ನೀವು ಆರೋಗ್ಯವಾಗಿದ್ದೀರೋ ಇಲ್ವೋ ಅನ್ನೋದನ್ನು ಇಷ್ಟುದಿನ ವೈದ್ಯರು ಹೇಳ್ತಾ ಇದ್ರು. ಆದ್ರೆ ಇನ್ಮೇಲೆ ಡಾಕ್ಟರ್ ಗಳ ಆ ಕೆಲಸವನ್ನು ಕೇವಲ ಒಂದು ಯಂತ್ರ ಮಾಡಲಿದೆ.  ಮನುಷ್ಯನ ಉಸಿರಾಟವನ್ನು ಗಮನಿಸಿ,  ವಾಸನೆಯನ್ನು ಗಮನಿಸಿ ಆತ ಆರೋಗ್ಯವಾಗಿದ್ದಾನೋ ಇಲ್ಲವೋ ಅನ್ನೋದನ್ನು ಈ ಮಷಿನ್ ಹೇಳಲಿದೆ. ಅಷ್ಟೇ ಅಲ್ಲ ನಿಮಗೆ ಯಾವ ಖಾಯಿಲೆ ಇದೆ ಅನ್ನೋದನ್ನು ಕೂಡ ಈ ಯಂತ್ರವೇ ಹೇಳುತ್ತದೆ.ಈ ಮಷಿನ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ರಕ್ತ ಸಂಬಂಧಿ ಖಾಯಿಲೆಗಳು, ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆ, ಮೂತ್ರಕ್ಕೆ ಸಂಬಂಧಿಸಿದ ರೋಗಗಳನ್ನು ಸುಲಭವಾಗಿ ಈ ಯಂತ್ರದ ಮೂಲಕ ಪತ್ತೆ ಮಾಡಬಹುದು. ಪ್ರತಿಯೊಬ್ಬ ಮನುಷ್ಯದ ದೇಹದಿಂದ್ಲೂ ಬೇರೆ ಬೇರೆ ತೆರನಾದ ವಾಸನೆ ಹೊರಹೊಮ್ಮುತ್ತದೆ.ಅವರ ವಯಸ್ಸು, ಮೆಟಬಾಲಿಕ್ ಪ್ರಕ್ರಿಯೆ, ಜೆನೆಟಿಕ್ಸ್, ಜೀವನ ಶೈಲಿಗೆ ತಕ್ಕಂತೆ ಶರೀರದ ಗಂಧವೂ ಬೇರೆಯಾಗಿರುತ್ತದೆ. ಅದೇ ರೀತಿ ಈ ಯಂತ್ರ ಕೂಡ ಮನುಷ್ಯನ ಚರ್ಮ ಮತ್ತು ಉಸಿರಿನ ವಾಸನೆಯ ಆಧಾರದ ಮೇಲೆ ಖಾಯಿಲೆಯನ್ನು ಪತ್ತೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ.ಉದಾಹರಣೆಗೆ ಮಧುಮೇಹ ರೋಗ ಹೊಂದಿರುವವರ ವಾಸನೆ ಸೇಬುಹಣ್ಣಿನಂತಿದ್ರೆ, ಟೈಫಾಯಿಡ್ ನಿಂದ ಬಳಲುತ್ತಿರುವವರಿಂದ ಬೇಕಿಂಗ್ ಬ್ರೆಡ್ ನಂತಹ ಗಂಧ ಹೊರಹೊಮ್ಮುತ್ತದೆ. ಈ ವಾಸನೆಯಿಂದ್ಲೇ ರೋಗವನ್ನು ಪತ್ತೆ ಮಾಡಬಲ್ಲ ಸೆನ್ಸಾರ್ ಒಂದನ್ನು ಯಂತ್ರದಲ್ಲಿ ಅಳವಡಿಸಲಾಗಿದೆ.

Sunday, 7 May 2017



ಹುಡುಗಿಯರಿಗೆ ಸಂಬಂಧಿಸಿದ ಈ ವಿಷಯಗಳನ್ನು ನೀವು ತಿಳಿದುಕೊಳ್ಳಿ…!



ಹುಡುಗಿಯರೇ ಹಾಗೇ ಅನಿಸುತ್ತದೆ. ಮೀನಿನ ಹೆಜ್ಜೆ ಕಂಡು ಹಿಡಿಯಬಹುದು ಹೆಂಗಸರ ಮನಸ್ಸು ತಿಳಿಯುವುದು ಕಷ್ಟ ಎಂಬ ಮಾತು ನಿಜವೆನಿಸುತ್ತದೆ. ತಪ್ಪು ಎಂದು ಗೊತ್ತಿದ್ದರೂ ಅದನ್ನು ಖಂಡಿಸುವ ಭಂಡ ಧೈರ್ಯ. ಯಾವುದೇ ಸಂದರ್ಭದಲ್ಲಿಯೂ ತಮ್ಮ ಹಠ ಗೆಲ್ಲಬೇಕು ಎಂಬ ಮನೋಭಾವ. ಅದರಲ್ಲಿಯೂ ಈ ವಿಷಯಗಳನ್ನು ಯಾವುದೇ ಕಾರಣಕ್ಕೂ ಯುವತಿಯರು ಸಾರ್ವಜನಿಕವಾಗಿ ಒಪ್ಪುವುದಿಲ್ಲ. ಇದು ಸಮೀಕ್ಷೆಯಲ್ಲಿ ವ್ಯಕ್ತವಾದ ಸತ್ಯ.

  • ಹುಡುಗಿಯರಿಗೆ ಬಟ್ಟೆ ಆರಿಸುವುದು ಸುಲಭದ ಮಾತಲ್ಲ. ಕೊನೆಯಲ್ಲಿ ಎರಡು ಬಟ್ಟೆ ಆರಿಸಿ ಇದಾ ಅದಾ ಎನ್ನುತ್ತಿರುತ್ತಾರೆ. ಅನೇಕ ವೇಳೆ ಈ ರೀತಿ ಆಗಬಾರದು ಎಂದು ಕೊಂಡರು ಹಾಗೇ ಆಗುತ್ತದೆ.
  • ಹುಡುಗರ ಸ್ವಚ್ಛತೆ ಬಗ್ಗೆ ಕಾಮೆಂಟ್ ಮಾಡುವ ಹುಡುಗಿಯರು, ಎಷ್ಟೋ ವೇಳೆ ಕೈ ತೊಳೆಯದೇ ಊಟಕ್ಕೆ ಕೂರುತ್ತಾರೆ. ಹುಡುಗರ ಬೇಜವಾಬ್ದಾರಿ, ಸ್ವಚ್ಛತೆ ಬಗ್ಗೆ ಹೇಳುವವರು, ಹೆಚ್ಚು ಬಾರಿ ಇದರ ಗಮನ ನೀಡುವುದಿಲ್ಲ.
  • ಹುಡುಗಿಯರು ತುಂಬಾ ದುಃಖದಿಂದ ಅಳುತ್ತಿದ್ದರೂ ಕನ್ನಡಿ ನೋಡುವುದನ್ನು ಮರೆಯುವುದಿಲ್ಲ. ಅಳುವಾಗ ತಾನು ಹೇಗೆ ಕಾಣಿಸುತ್ತೇನೆ ಎಂಬುದನ್ನು ನೋಡಿಕೊಳ್ತಾರೆ. ಎಷ್ಟೋ ವೇಳೆ ಅಳುಮುಂಜಿ ಮುಖದಲ್ಲಿಯೇ ಸೆಲ್ಫಿ ತೆಗೆದುಕೊಳ್ಳುತ್ತಾರೆ.
  • ಹುಡುಗಿಯರಿಗೆ ತುಂಬಾ ಸೌಂದರ್ಯ ಪ್ರಜ್ಞೆ ಎಂದು ನಂಬಿದ್ದರೆ ಅದು ತಪ್ಪು. ಹುಡುಗಿಯರು ತುಂಬಾ ಅವಶ್ಯಕತೆ ಇದ್ದಾಗ ಮಾತ್ರ ವ್ಯಾಕ್ಸಿಂಗ್ ಮಾಡುತ್ತಾರೆ. ಬಟ್ಟೆ ಕೂಡ ಅಷ್ಟೇ, ತೊಡುವಾಗ ಮಾತ್ರ ಅದಕ್ಕೆ ಐರನ್ ಮಾಡಬೇಕು ಎಂದು ನೆನಪಾಗುತ್ತದೆಯಂತೆ.
  • ವಿಚಿತ್ರ ಎನಿಸಿದರು ನಿಜ ಎನ್ನುವ ಮತ್ತೊಂದು ಆಶ್ಚರ್ಯಕರ ಸಂಗತಿ ಎಂದರೆ ಮೂಗಿನಲ್ಲಿ ಬೆರಳಾಡಿಸುವುದು. ಸಾರ್ವಜನಿಕವಾಗಿ ಯಾರೂ ತಮ್ಮನ್ನು ನೋಡುತ್ತಿಲ್ಲ ಎಂಬ ಖಾತ್ರಿ ಅವರಿಗಿದ್ದರೆ, ಮೂಗಿಗೆ ಬೆರಳಾಗಿ ತಿರುವುತಾರಂತೆ.
  • ವಾದ ಮಾಡುವಲ್ಲಿ ಹೆಂಗಳೆಯರದು ಎತ್ತಿದ ಕೈ. ಅದರಲ್ಲಿಯೂ ಎದುರಾಳಿ ಶತ್ರು ಆಗಿದ್ದರೆ, ಅದರಲ್ಲಿ ಮೂಗು ತೂರಿಸಿ ಹಾದಿ ರಂಪ, ಬೀದಿ ರಂಪ ಮಾಡುವುದು ಖಂಡಿತ.
  • ಭಾವನಾತ್ಮಕವಾಗಿ ಹುಡುಗಿಯರು ತುಂಬಾ ಸೆನ್ಸಿಟಿವ್. ಅದರಲ್ಲಿಯೂ ಅವರ ಪ್ರೀತಿ ಪಾತ್ರರ ಸಂದೇಶ ಅವರ ಇನ್ ಬಾಕ್ಸ್ ನಲ್ಲಿದ್ದರೆ ದಿನಕ್ಕೆ ಕನಿಷ್ಟ ಎಂದರೂ 10 ಬಾರಿ ಓದುತ್ತಾರಂತೆ.

Thursday, 4 May 2017

Karnataka Postal Circle Recruitment 2017 – Apply Online for 1048 Gramin Dak Sevak Posts

Karnataka Postal Circle Recruitment 2017 – Apply Online for 1048 Gramin Dak Sevak Posts

Karnataka Postal Circle Recruitment 2017 – Apply Online for 1048 Gramin Dak Sevak Posts: Karnataka Postal Circle has invited applications for the recruitment of 1048 Gramin Dak Sevak vacancies under Karnataka Circle. Eligible candidates may apply online from 08-04-2017 to 08-05-2017. Other details like age limit, educational qualification, selection process, application fee & how to apply are given below….

Karnataka Postal Circle Vacancy Details:
Total No. of Posts: 1048
Name of the Post: Gramin Dak Sevak 
Name of the Division:
1. Bangalore East: 19 Posts
2. Bangalore GPO: 10 Posts
3. Bangalore South: 20 Posts
4. Bangalore West: 07 Posts
5. Channapatna: 41 Posts
6. Bagalkot: 29 Posts
7. Belgaum: 40 Posts
8. Bellary: 48 Posts
9. Bidar: 65 Posts
10. Bijapur: 31 Posts
11. Chikodi: 38 Posts
12. Dharwad: 24 Posts
13. Gadag: 52 Posts
14. Gokak: 15 Posts
15. Gulbarga: 67 Posts
16. Haveri: 25 Posts
17. Karwar: 29 Posts
18. Raichur: 42 Posts
19. Sirsi: 23 Posts
20. Chikmagalur: 30 Posts
21. Chitradurga: 59 Posts
22. Hassan: 50 Posts
23. Kodagu: 20 Posts
24. Kolar: 50 Posts
25. Mandya: 28 Posts
26. Mangalore: 07 Posts
27. Mysore: 29 Posts
28. Nanjangud: 15 Posts
29. Puttur: 21 Posts
30. Shimoga: 30 Posts
31. Tumkur: 66 Posts
32. Udupi: 18 Posts
Community wise Consolidation of Posts:
1. UR: 579 Posts
2. OBC: 240 Posts
3. SC: 150 Posts
4. ST: 79 Posts
Age Limit: Candidates age should be 18 – 40 years as on last date of submission of application through online. Age relaxation of age is applicable by up to 5 years for SC/ ST candidates, 3 years for OBC, 10 Years for PH candidates.
Educational Qualification: Candidates should pass 10th standard from approved state boards by the respective State Govt./ Central Govt with computer knowledge.
Selection Process: Candidates will be selected based on merit.
Application Fee: Candidates should pay Rs. 100/- deposited at any Head Post Office (For making the payment candidate should inform Registration Number at the PO Counter). No fee for female & SC/ ST candidates.
How to Apply: Eligible candidates may apply online through the website “https://indiapost.gov.in or https://appost.in/gdsonline” from 08-04-2017 to 08-05-2017.
Instructions to Apply Online:
1. Login through the website “https://appost.in/gdsonline”.
2. Click on Registration for new user.
3. Fill all the details carefully & submit the form.
4. Take printout of application for future use.
Important Dates:
Start Date to Apply Online: 08-04-2017.
Last Date to Apply Online: 08-05-2017.
For more details like emoluments, desirable qualification & other information click on the link given below….


Click Here Apply online

http://www.appost.in/gdsonline/

ವ್ಯಾಯಾಮ ಮಾಡುವವರು ಸಡನ್ ಆಗಿ ನಿಲ್ಲಿಸಿದರೆ…ದಪ್ಪ ಆಗುತ್ತಾರಾ? ಇದರಲ್ಲಿ ನಿಜವೆಷ್ಟು??



ಪ್ರತಿ ವ್ಯಕ್ತಿಗೂ ಪೌಷ್ಠಿಕ ಆಹಾರ, ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಎಷ್ಟು ಮುಖ್ಯವೋ ಆರೋಗ್ಯವಾಗಿರಬೇಕಾದರೆ ನಿತ್ಯ ವ್ಯಾಯಾಮ ಮಾಡುವುದು ಅಷ್ಟೇ ಮುಖ್ಯ. ದಪ್ಪ ಇರುವವರು ಸಣ್ಣ ಆಗಲು ವ್ಯಾಯಾಮ ಮಾಡುವುದು, ಸುಂದರವಾದ ಆಕಾರಕ್ಕೆ ಮರಳುವುದು ಸ್ವಲ್ಪ ಕಷ್ಟಕರವಾದ ಕೆಲಸ. ಆದರೂ ಆರೋಗ್ಯದ ದೃಷ್ಟಿಯಿಂದ ಇದೆಲ್ಲಾ ಮಾಡಲೇಬೇಕು. ಎಷ್ಟೋ ವರ್ಷಗಳಿಂದ ವ್ಯಾಯಾಮ ಮಾಡುತ್ತಾ ಬಂದಿರುವವರು ಸಡನ್ ಆಗಿ ಅದನ್ನು ನಿಲ್ಲಿಸಿದರೆ..? ಆಗ ಏನೆಲ್ಲಾ ಪರಿಣಾಮಗಳಾಗುತ್ತವೆ ಗೊತ್ತಾ? ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿರುವವರು ಅದನ್ನು ಸಡನ್ ಆಗಿ ಬಿಟ್ಟರೆ ಏನಾಗುತ್ತದೆ? ಈಗಾಗಲೆ ವ್ಯಾಯಾಮ ಮಾಡಿದ ದೇಹವೇ ಅಲ್ಲವೇ? ಅದನ್ನು ನಿಲ್ಲಿಸಿದರೂ ಏನಾಗುತ್ತದೆ. ಏನೂ ಆಗಲ್ಲ…ಎಂದುಕೊಳ್ಳುತ್ತಿದ್ದೀರಾ? ಆದರದು ತಪ್ಪು. ಯಾಕೆಂದರೆ ವ್ಯಾಯಾಮ ಮಾಡದೇ ಇರುವವರಷ್ಟೇ ಅಲ್ಲ, ಈಗಾಗಲೆ ಎಷ್ಟೋ ದಿನಗಳಿಂದ ವ್ಯಾಯಾಮ ಮಾಡುತ್ತಿರುವವರು ಸಹ ಅದನ್ನು ನಿಲ್ಲಿಸಿದರೆ ಆಗ ಇಬ್ಬರಿಗೂ ಒಂದೇ ರೀತಿಯ ಪರಿಣಾಮಗಳಾಗುತ್ತವೆ. ಅವೇನೆಂದರೆ..
1. ಎಷ್ಟೋ ಕಾಲದಿಂದ ವ್ಯಾಯಾಮ ಮಾಡುತ್ತಿದ್ದರೂ ಒಮ್ಮೆಲೆ ಅದನ್ನು ನಿಲ್ಲಿಸಿದರೆ…ಹಾಗೆಯೇ ಕನಿಷ್ಟ 3-4 ವಾರಗಳ ಕಾಲ ಮುಂದುವರೆದರೆ ಆಗ ಆ ರೀತಿಯ ವ್ಯಕ್ತಿಗಳ ದೇಹದಲ್ಲಿ ಏನಾಗುತ್ತದೆಂದರೆ….ಮೊದಲು ಅವರ ಎಜರ್ಜಿ ಲೆವೆಲ್ ಕಡಿಮೆಯಾಗುತ್ತದೆ. ಮುಂಚಿನಂತೆ ಫಿಟ್ ಆಗಿರಲ್ಲ. ಶಕ್ತಿ ಕಡಿಮೆಯಾಗುತ್ತದೆ.
2. ವ್ಯಾಯಾಮ ನಿಲ್ಲಿಸಿದರೆ ಸ್ವಲ್ಪ ಸಮಯಕ್ಕೆ ದಪ್ಪ ಆಗುತ್ತಾರೆ. ಮುಖ್ಯವಾಗಿ ಹೊಟ್ಟೆ ಬೆಳೆಯುತ್ತದೆ. ಹಾಗಂತ ನಾವು ಹೇಳುತ್ತಿಲ್ಲ. ವೈದ್ಯರು ಹೇಳುತ್ತಿದ್ದಾರೆ. ವ್ಯಾಯಾಮ ಮಾಡುವವರು ಅದನ್ನು ಸಡನ್ ಆಗಿ ನಿಲ್ಲಿಸಿದರೆ ಆಗ ಶಕ್ತಿ ಮಾಂಸಖಂಡಗಳಿಗೆ ತಲುಪದೆ ಅದು ದೇಹದಲ್ಲಿ ಕೊಬ್ಬಾಗಿ ಸಂಗ್ರಹವಾಗುತ್ತದೆ. ಇದರಿಂದ ಮೊದಲು ಹೊಟ್ಟೆ ಬೆಳೆಯುತ್ತದೆ.
3. ಹೃದಯ ಬಡಿದುಕೊಳ್ಳುವುದು, ಅದರ ಕೆಲಸದಲ್ಲೂ ಗಣನೀಯ ಬದಲಾವಣೆಗಳಾಗುತ್ತವೆ. ವ್ಯಾಯಾಮ ಮಾಡುತ್ತಿದ್ದಾಗ, ಮಾಡದಿದ್ದಾಗ ಹೃದಯದ ಕೆಲಸದಲ್ಲಿ ಬದಲಾವಣೆ ಬರುತ್ತಿರುತ್ತದಂತೆ.
4. ವ್ಯಾಯಾಮ ನಿಲ್ಲಿಸಿದ 12 ವಾರಗಳಿಗೆ ಫಿಟ್‌ನೆಸ್ ಇರುವುದೇ ಇಲ್ಲ. ಫಿಟ್‌ನೆಸ್ ಲೆವೆಲ್ಸ್ ಸಾಮಾನ್ಯ ಸ್ಥಿತಿಗೆ ಬರುತ್ತವೆ. ಇದರಿಂದ ಅಷ್ಟು ದಿನ ವ್ಯಾಯಾಮ ಮಾಡಿದ್ದು ವ್ಯರ್ಥವಾಗುತ್ತದಂತೆ.
5. ವ್ಯಾಯಾಮ ಮಾಡುವಾಗ ಮೆಟಬಾಲಿಸಂ ಚೆನ್ನಾಗಿದ್ದ ಕಾರಣ ಎಷ್ಟು ತಿಂದರು, ಏನು ತಿಂದರೂ ಅದು ಹಾಗೆಯೇ ಜೀರ್ಣವಾಗುತ್ತದೆ. ಆದರೆ ವ್ಯಾಯಾಮ ನಿಲ್ಲಿಸಿದರೆ ತಿಂಡಿ ಹೆಚ್ಚಾಗಿ ತಿನ್ನೋಣ ಎಂದರೆ ಸಾಧ್ಯವಾಗಲ್ಲ. ಒಂದು ವೇಳೆ ತಿಂದರೆ ದಪ್ಪ ಆಗುವುದಷ್ಟೇ ಅಲ್ಲ, ತೂಕ ಕೂಡ ಹೆಚ್ಚಾಗುತ್ತದೆ.
6. ವ್ಯಾಯಾಮ ಮಾಡುವಾಗ ಸರಿಯಾಗಿರುವ ಬಿಪಿ ಲೆವೆಲ್ಸ್ ಅದನ್ನು ಬಿಟ್ಟಾಗ ನಿಯಂತ್ರಣ ಕಳೆದುಕೊಳ್ಳುತ್ತದೆ. ಬಿಪಿ ಲೆವೆಲ್ಸ್ ನಿಯಂತ್ರಣದಲ್ಲಿರಲ್ಲವಂತೆ. ಸಾಮಾನ್ಯ ವ್ಯಕ್ತಿಗಳ ಬಿಪಿ ಲೆವೆಲ್ಸ್ ಮಾದರಿಯಲ್ಲಿರುತ್ತವಂತೆ.
7. ವ್ಯಾಯಾಮ ಮಾಡಿದ ಸಮಯದಲ್ಲಿ ಹೆಚ್ಚಿನ ದೂರ ಓಡುವ ಸಾಮರ್ಥ್ಯ ಇರುವವರು ಸಹ ಅದನ್ನು ಬಿಟ್ಟಾಗ ಸ್ವಲ್ಪ ದೂರ ನಡೆದರೂ ಬಳಲುತ್ತಾರೆ.
8. ದಿನಗಟ್ಟಲೆ ಮಾಡುತ್ತಿರುವ ವ್ಯಾಯಾಮವನ್ನು ಒಂದೇ ಸಲ ನಿಲ್ಲಿಸಿದರೆ ಅದರಿಂದ ಮಿದುಳಿನ ಕೆಲಸದಲ್ಲೂ ಬದಲಾವಣೆ ಆಗುತ್ತದಂತೆ. ಮಿದುಳು ಚುರುಕಾಗಿ ಕೆಲಸ ಮಾಡಲ್ಲವಂತೆ.
9. ಇನ್ನು ಕೊನೆಯದಾಗಿ ಸ್ನಾಯುಗಳು. ವ್ಯಾಯಾಮ ಮಾಡುವಾಗ ಉತ್ತಮ ಆಕಾರದಲ್ಲಿರುವ ಸ್ನಾಯುಗಳು ವ್ಯಾಯಾಮ ಬಿಟ್ಟಾಗ ಆಕಾರ ಕಳೆದುಕೊಳ್ಳುತ್ತವೆ. ಅವು ಮತ್ತೆ ಮುಂಚಿನ ಶೇಪ್‌ಗೆ ಬರುವುದು ಸ್ವಲ್ಪ ಕಷ್ಟಕರವಾಗುತ್ತದೆ.


ಆಧಾರ್ ಕಾರ್ಡು ನಕಲಿ ವೆಬ್‌ಸೈಟ್‍ಗಳು ಇವು….ಎಚ್ಚರ ಇಲ್ಲದಿದ್ದರೆ ನಷ್ಟ ತಪ್ಪಿದ್ದಲ್ಲ..!















ಆಧಾರ್… ಒಂದು ಕಾಲದಲ್ಲಿ ಕೇವಲ ಗ್ಯಾಸ್ ಸಬ್ಸಿಡಿಗಾಗಿ ಮಾತ್ರ ಇದನ್ನು ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಆ ರೀತಿ ಇಲ್ಲ. ಬಹಳಷ್ಟು ಕೆಲಸಗಳಿಗೆ ಆಧಾರ್ ಬೇಕೇಬೇಕು. ಇನ್ನೂ ಹೇಳಬೇಕೆಂದರೆ ಇಂದು ಶ್ರೀಸಾಮಾನ್ಯರಿಗೆ ಸರಕಾರ ನೀಡುತ್ತಿರುವ ಹಲವು ಯೋಜನೆಗಳ ಫಲಾನುಭವಿಗಳಾಗಬೇಕಾದರೆ ಆಧಾರ್ ಕಡ್ಡಾಯವಾಗಿ ಬೇಕು. ಆದರೆ ಆಧಾರ್ ಕಾರ್ಡ್ ಮಾಡಿಸದವರು ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈಗವರು ಕಾರ್ಡ್ ಮಾಡಿಸುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಅವರಷ್ಟೇ ಅಲ್ಲದೆ, ಈಗಾಗಲೆ ಆಧಾರ್ ಕಾರ್ಡ್ ಉಳ್ಳವರು ಅಪ್‍ಡೇಟ್ ಮಾಡಿಕೊಳ್ಳಲು ಸುಲಭವಾಗಿರುತ್ತದೆಂದು ಆನ್‌ಲೈನ್‌ಗೆ ಮೊರೆಹೋಗುತ್ತಿದ್ದಾರೆ. ಇದನ್ನೇ ಅವಕಾಶವಾಗಿ ತೆಗೆದುಕೊಂಡ ಕೆಲವರು ಆಧಾರ್ ಕಾರ್ಡುಗಳಿಗೆ ಏಕಾಏಕಿ ನಕಲಿ ಸೈಟ್‌ಗಳನ್ನು ಏರ್ಪಾಟು ಮಾಡಿ ಶ್ರೀಸಾಮಾನ್ಯರನ್ನು ಮೋಸ ಮಾಡುತ್ತಿದ್ದಾರೆ.
aadhaarupdate.com, aadhaarindia.com, pvcaadhaar.in, aadhaarprinters.com, geteaadhaar.com, downloadaadhaarcard.in, aadharcopy.in, duplicateaadharcard.com. ನೋಡಿದರಲ್ಲವೇ ಎಷ್ಟೆಲ್ಲಾ ನಕಲಿ ಆಧಾರ್ ಸೈಟ್‌ಗಳಿವೆ ಎಂದು. ಈ ಸೈಟ್‌ಗಳು ಆಧಾರ್ ಕಾರ್ಡನ್ನು ಕೊಡಿಸುತ್ತೇವೆಂದು, ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡುತ್ತೇವೆಂದು ಹೇಳಿ ಜನರನ್ನು ಮೋಸ ಮಾಡುತ್ತಿವೆ. ಮೋಸ ಹೋದವರು ಪ್ರಕರಣ ದಾಖಲಿಸಿದ ಕಾರಣ ಪೊಲೀಸರು ಆ ವೆಬ್‌ಸೈಟ್‍ಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಅವುಗಳನ್ನು ನಿರ್ವಹಿಸುತ್ತಿದ್ದವರನ್ನೂ ಅರೆಸ್ಟ್ ಮಾಡಿದ್ದಾರೆ.
ಯಾರಾದರೂ ಆಧಾರ್ ಕಾರ್ಡು ನೋಂದಾಯಿಸಿಕೊಳ್ಳಬೇಕಾದರೆ ಸಮೀಪದ ಆಧಾರ್ ಕೇಂದ್ರ ಅಥವಾ ಸರಕಾರಿ ಕಚೇರಿಗೆ ಹೋಗಬೇಕು. ಅವರು ಆಧಾರ್ ಕೇಂದ್ರ ಎಲ್ಲಿದೆ ಎಂಬ ವಿವರಗಳನ್ನು ನೀಡುತ್ತಾರೆ. ಇಲ್ಲದಿದ್ದರೆ ಅಧಿಕೃತ ವೆಬ್‌ಸೈಟ್ ಆದ www.uidai.gov.in ಗೆ ಭೇಟಿ ನೀಡಿದರೆ, ಆಧಾರ್ ಗೆ ನೋಂದಾಯಿಸಿಕೊಳ್ಳಬಹುದು. ಈಗಾಗಲೆ ಆಧಾರ್ ಉಳ್ಳವರು ತಮ್ಮ ವಿವರಗಳನ್ನು ಈ ಸೈಟ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬಹುದು. ಆದರೆ ನಕಲಿ ವೆಬ್‌ಸೈಟ್‌ಗಳಿಗೆ ಮಾತ್ರ ಭೇಟಿ ನೀಡಬೇಡಿ. ಇಲ್ಲದಿದರೆ ಎಷ್ಟೋ ಅಮೂಲ್ಯವಾದ ನಿಮ್ಮ ಮಾಹಿತಿ ದುಷ್ಟರ ಕೈಸೇರುತ್ತದೆ. ಆ ಬಳಿಕ ನೊಂದು ಪ್ರಯೋಜನವಿಲ್ಲ.

ನಿತ್ಯ ಎಸಿಯಲ್ಲಿ ಇರುತ್ತೀರಾ..? ಆದರೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು..!


ಒಂದು ಕಡೆ ಬಿಸಿಲ ಬೇಗೆ. ಇನ್ನೊಂದು ಕಡೆ ಜನ ತಣ್ಣಗಿನ ಜಾಗದ ಕಡೆಗೆ ಹೆಜ್ಜೆಹಾಕುತ್ತಿದ್ದಾರೆ. ಕೆಲವರು ಕೂಲರ್‌ಗೆ ಮೊರೆಹೋಗುತ್ತಿದ್ದರೆ ಇನ್ನೂ ಕೆಲವರು ಎಸಿಗಳಲ್ಲಿ ಕಳೆಯುತ್ತಿದ್ದಾರೆ. ಆದರೆ ನಿಮಗೆ ಗೊತ್ತೇ..? ಪ್ರಕೃತಿ ಸಹಜವಾದ ವಾತಾವರಣ ಅಲ್ಲದೆ ಕೃತಕವಾಗಿ ಸೃಷ್ಟಿಸಿದ ತಣ್ಣಗಿನ ವಾತಾವರಣದಲ್ಲಿದ್ದರೆ ಅದರಿಂದ ನಮಗೆ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹಾಗಂತ ನಾವು ಹೇಳುತ್ತಿಲ್ಲ, ವೈದ್ಯರು ಹೇಳುತ್ತಿದ್ದಾರೆ. ನಿತ್ಯ ಎಸಿ ಕಾರು, ರೂಮುಗಳಲ್ಲಿರುವವರು ಕಡ್ಡಾಯವಾಗಿ ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಅವು..

1. ಸಹಜವಾದ ವಾತಾವರಣದಲ್ಲಿ ದೇಹ ಭರಿಸಬಹುದಾದ ಉಷ್ಣತೆಯಲ್ಲಿ ಬದುಕುವುದು ಜೀವರಾಶಿಗಳಿಗೆಲ್ಲಾ ಪ್ರಕೃತಿ ಪರವಾದ ರಕ್ಷಣೆ ಸಿಗುತ್ತದೆ. ಆದರೆ ಪ್ರಕೃತಿ ವಿರುದ್ಧವಾದ ಪದ್ದತಿಗಳಲ್ಲಿ ಕೃತಕ ತಂಪಿಗಾಗಿ ನಾವು ಇಡುವ ಪ್ರತಿಹೆಜ್ಜೆ ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಿದ್ದಾರೆ ತಜ್ಞರು. ಅದೇ ಕೆಲಸವಾಗಿ ಎಸಿಯಲ್ಲಿ ಕೂತು ಕೆಲಸ ಮಾಡಿದರೆ ಕೆಲಸ ಮುಗಿಯುವ ವೇಳೆಗೆ ಭರಿಸಲಾಗದ ತಲೆನೋವು, ನಿಶ್ಯಕ್ತಿಯಂತಹ ಲಕ್ಷಣಗಳು ಕಾಣಿಸುತ್ತವೆ.
2. ತಣ್ಣಗಿನ ವಾತಾವರಣದಲ್ಲಿ ಸ್ನಾಯುಗಳಿಗೆ ಸಾಕಷ್ಟು ರಕ್ತಸಂಚಲನ ನಡೆಯದ ಕಾರಣ ಸುಸ್ತಾಗುತ್ತದೆ.
3.ಒಣಚರ್ಮ ಇರುವವರು ಎಸಿಯಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಚರ್ಮ ಇನ್ನಷ್ಟು ಒಣಗುತ್ತದೆ. ಈ ರೀತಿಯ ಲಕ್ಷಣಗಳು ಕಾಣಿಸಿದರೆ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು.
4. ದೀರ್ಘಕಾಲಿಕ ಸಮಸ್ಯೆಗಳು ಎಂದರೆ…ಆರ್ಥರೈಟಿಸ್, ನ್ಯೂರೈಟಿಸ್‌ನಂತಹ ಕಾಯಿಲೆಗಳಿರುವವರಿಗೆ ಆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಕೆಲವರಲ್ಲಿ ಈ ನ್ಯೂರೈಟಿಸ್ ಕಾರಣ ನಿಶ್ಯಕ್ತಿ ಉಂಟಾಗುವ ಸಾಧ್ಯತೆಗಳೂ ಹೆಚ್ಚು.
5. ಈ ಹಿಂದೆ ಬಿಸಿ ವಾತಾವರಣದಲ್ಲಿ ಇರುವವರು ನಿತ್ಯ ಎಸಿಯಲ್ಲಿ ಇರುವುದನ್ನು ಅಭ್ಯಾಸವಾದವರು ಇನ್ನು ಯಾವುದೇ ರೀತಿಯಲ್ಲೂ ಅವರು ಬಿಸಿಯನ್ನು ಭರಿಸಲಾಗಲ್ಲ. ಸುಲಭವಾಗಿ ಸೂರ್ಯಾಘಾತಕ್ಕೆ ಒಳಗಾಗುತ್ತಾರೆ.
6. ಬಹಳ ಸಮಯ ಎಸಿ ಕಾರಿನಲ್ಲಿ, ಮುಚ್ಚಿದ ಡೋರ್ ಕಾರಣ ಅಲ್ಲಿ ಸೂಕ್ಷ್ಮ ಜೀವಿಗಳು ಅಲ್ಲೇ ಸುತ್ತುತ್ತಿರುತ್ತವೆ. ಸುಲಭವಾಗಿ ಶ್ವಾಸ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಸೋಂಕು ಸಹ ಬರುವ ಸಾಧ್ಯತೆಗಳಿವೆ.
7. ನಿತ್ಯ ಎಸಿಯಲ್ಲಿ ಇರುವವರು ಕಡ್ಡಾಯವಾಗಿ ಪ್ರತಿ ಎರಡು ಗಂಟೆಗೊಮ್ಮೆ ಸ್ವಲ್ಪ ಹೊತ್ತು ಹೊರಗೆ ಬಂದು ಸಹಜ ವಾತಾವರಣದಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಹೋಗಬೇಕು. ಆ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಏನಾಗುವುದಿಲ್ಲ.

ಹುಟ್ಟುವ ಮಗು ಗಂಡೋ ?ಹೆಣ್ಣೋ ? ಎಂಬುದನ್ನು ಈ ಚಾರ್ಟ್ ಮೂಲಕ ತಿಳಿಯಬಹುದಂತೆ!

ತಮಗೆ ಹುಟ್ಟಲಿರುವ ಮಗು ಗಂಡೋ,ಹೆಣ್ಣೋ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲ ದಂಪತಿಗಳಿಗೂ ಇದ್ದೇ ಇರುತ್ತದೆ.ಸ್ಕ್ಯಾನಿಂಗ್ ನ ಅಗತ್ಯವಿಲ್ಲದೆ, ಈ ಕೋಷ್ಠಕದ ಆಧಾರವಾಗಿ ನಿಮಗೆ ಹುಟ್ಟಲಿರುವ ಮಗು ಗಂಡೋ…?,ಹೆಣ್ಣೋ? ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹುಟ್ಟಲಿರುವ ಮಗುವಿನ ಕುರಿತ ಈ ಕೋಷ್ಟಕದ ಮಾಹಿತಿ ಶೇ 90 ಸರಿಯಾಗಿದೆಯಂತೆ.ಸುಮಾರು 700 ವರ್ಷಗಳ ಹಿಂದೆ ಚೀನಾ ದೇಶದ ಓರ್ವ ರಾಜನ ಸಮಾಧಿಯಲ್ಲಿ ಈ ಚಾರ್ಟ್ ದೊರೆಯಿತಂತೆ.ಪ್ರಸ್ತುತ ಇದನ್ನು ಚೀನಾ ದೇಶದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿಟ್ಟಿದ್ದಾರಂತೆ.
ಹೆ = ಹೆಣ್ಣು, ಗಂ = ಗಂಡು
ಈ ಚಾರ್ಟ್ ಮೂಲಕ ಹುಟ್ಟಲಿರುವ ಮಗು ಗಂಡೋ/ಹೆಣ್ಣೋ ತಿಳಿದುಕೊಳ್ಳುವ ವಿಧಾನ :
ಈ ಚಾರ್ಟ್ ನ ಮೇಲಿನ ಸಾಲಿನಲ್ಲಿರುವ 18 ರಿಂದ 45 ಅಂಕಿಗಳು ಮಹಿಳೆಯ ವಯಸನ್ನು ಸೂಚಿಸುತ್ತವೆ.
ಮೇಲಿನಿಂದ ಕೆಳಕ್ಕೆ, ಜನವರಿ ಯಿಂದ ಡಿಸೆಂಬರ್ ವರೆಗೆ ತಿಂಗಳುಗಳನ್ನು ಸೂಚಿಸುತ್ತದೆ.
ಉದಾ :
1)27 ವರ್ಷದ ಮಹಿಳೆಗೆ …ಜನವರಿ ತಿಂಗಳಲ್ಲಿ ಮುಟ್ಟು ನಿಂತಿದ್ದರೆ,ಹುಟ್ಟುವ ಮಗು ‘ಹೆಣ್ಣು’.
2)23 ವರ್ಷದ ಮಹಿಳೆಗೆ ….ಸೆಪ್ಟೆಂಬರ್ ತಿಂಗಳಲ್ಲಿ ಮುಟ್ಟು ನಿಂತಿದ್ದರೆ, ಹುಟ್ಟುವ ಮಗು ‘ಗಂಡು’
ನೀವು ಸಹ ಒಮ್ಮೆ ಪ್ರಯತ್ನಿಸಿ ನೋಡಿ ಕೊನೆಯ ಸಲ ಮುಟ್ಟಾದ ತಿಂಗಳು,ಅಂದಿನ ವಯಸು ಇವೆರಡನ್ನೂ ತಾಳೆ ಮಾಡಿ ನೋಡಿ. ಸರಿಯೋ/ತಪ್ಪೋ ತಿಳಿಯುತ್ತದೆ

Wednesday, 3 May 2017

‘100 ರೂಪಾಯಿಗಳಿಂದ ಲಕ್ಷಾಧಿಕಾರಿಯಾಗುವುದು ಹೇಗೆ?’ ಬಿಲ್ ಗೇಟ್ಸ್ ಹೇಳಿದ ಜೀವನ ಸತ್ಯ.!


ನೀವು ಯಾವುದಾದರೂ ವ್ಯಾಪಾರವನ್ನು ಪ್ರಾರಂಭಿಸಬೇಕೆಂದುಕೊಂಡಿದ್ದೀರಾ? ಬಂಡವಾಳಕ್ಕೆ ಬೇಕಾಗುವಷ್ಟು ಹಣ ನಿಮ್ಮಲ್ಲಿಲ್ಲವೇ ಸಾಲಕ್ಕಾಗಿ ಪ್ರಯತ್ನಿಸುತ್ತಿರುವಿರಾ?ಹಾಗಾದರೆ,ವ್ಯಾಪಾರವನ್ನು ಪ್ರಾರಂಭಿಸಲು ಇವುಗಳ ಅವಶ್ಯಕತೆಯಿಲ್ಲ ಎನ್ನುತ್ತಾರೆ ಬಿಲ್ಗೇಟ್ಸ್. ಕಷ್ಟಪಡುವ ತತ್ವಕ್ಕೆ ಸ್ವಲ್ಪ ಟೆಕ್ನಿಕ್ ಜೋಡಿಸಿದರೆ. . . ವರ್ಷ ಮುಗಿಯುವುದರೊಳಗೆ ನೀವು ಲಕ್ಷಾಧಿಕಾರಿಯಾಗಬಹುದೆಂದು ಹೇಳುತ್ತಾರೆ ಸಾಫ್ಟ್ ವೇರ್ ಮಾಂತ್ರಿಕ,ಪ್ರಪಂಪದಲ್ಲೇ ಹೆಚ್ಚು ಸಂಪತ್ತನ್ನು ಹೊಂದಿರುವ ಬಿಲ್ ಗೇಟ್ಸ್….ಒಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರವನ್ನು ಕೇಳಿದರೆ. .. . ವಿಭಿನ್ನವಾಗಿ ಯೋಚಿಸಿದರೆ ಹಣಗಳಿಸುವುದು ಅಷ್ಟೇನೂ ಕಷ್ಟವಲ್ಲವೆಂದು ಹೇಳಬಹುದು.

ಸಂದರ್ಶನದಲ್ಲಿ ಕೇಳಿದ ಪ್ರಶ್ನೆ :ನಿಮ್ಮ ಬಳಿ 100 ರೂಪಾಯಿಗಳಿದ್ದರೆ. . . ಅದನ್ನು ಯಾವುದರಲ್ಲಿ ವಿನಿಯೋಗಿಸುತ್ತೀರಿ?ಎಷ್ಟು ಲಾಭ ಗಳಿಸುತ್ತೀರಿ?
ಬಿಲ್ ಗೇಟ್ಸ್ ನೀಡಿದ ಉತ್ತರ :ನನ್ನ ಬಳಿ 100 ರೂಪಾಯಿಗಳಿದ್ದರೆ. . . ಮೊದಲಿಗೆ ಒಂದು ಕೋಳಿಯನ್ನು ಖರೀದಿಸುತ್ತೇನೆ. . . 3 ತಿಂಗಳಲ್ಲಿ ಆ ಕೋಳಿ ಇಡುವ ಮೊಟ್ಟೆಗಳಿಂದ 8-10 ಮರಿಗಳಾಗುತ್ತವೆ.ಒಂದೆರಡು ತಿಂಗಳುಗಳು ಕಳೆಯುವುದರೊಳಗೆ. . .ಆ ಕೋಳಿ ಮರಿಗಳು ಸಹ ದೊಡ್ಡವಾಗಿ ಅವುಗಳಿಂದಳೂ ಮರಿಗಳಾಗುತ್ತವೆ.ಹೀಗೆ 6 ತಿಂಗಳುಗಳಲ್ಲಿ ಸಿಗುವ ಮೊದಲ ಆದಾಯವನ್ನು ಲೆಕ್ಕ ಹಾಕಿದರೆ. . .10600(ಒಂದು ಕೋಳಿ 2 ಕೆಜಿ ಇದ್ದರೆ,ಕೆಜಿ ಗೆ 300 ಪ್ರಕಾರ. . .)6000 ರೂಪಾಯಿಗಳ ಆದಾಯ ಬರುತ್ತದೆ. ಆ ಹಣದಲ್ಲಿ ಇನ್ನಷ್ಟು ಲೇಯರ್ ( ಮೊಟ್ಟೆಯಿಡುವ ಕೋಳಿಗಳು)ಗಳನ್ನು ಕೊಳ್ಳುತ್ತೇನೆ.ಈಗ ಪ್ರತಿ ದಿನ ಕೋಳಿ ಇಡುವ ಮೊಟ್ಟೆಗಳನ್ನು ಮಾರಿ ಹಣ ಸಂಪಾದಿಸುತ್ತೇನೆ.. . ಇದರ ಜತೆ ನನ್ನ ಬಳಿಯಿರುವ ಕೋಳಿಗಳ ಸಂಖ್ಯೆಯೂ ಬೆಳೆಯುತ್ತಿರುತ್ತದೆ.! ಹೀಗೆ 100 ಕೋಳಿಗಳನ್ನು 1 ವರ್ಷ ನಿರ್ವಹಿಸಿದರೆ. . . ಒಟ್ಟು 100X 600 X3 = 1,8 ಲಕ್ಷ ಗಳಿಸಬಹುದು( ಕೋಳಿ ಮೊಟ್ಟೆಗಳಿಂದ ಪ್ರತ್ಯೇಕ ಆದಾಯ ಬರುತ್ತದೆ)ಕೋಳಿಗಳನ್ನು ಸಾಕುವುದರ ಜೊತೆಗೆ ಬೇರೇ ಕೆಲಸಗಳನ್ನು ಮಾಡುವ ಅವಕಾಶವೂ ಇದೆ. ಅದರ ಆದಾಯವೂ ನನ್ನದಾಗುತ್ತದ.

Saturday, 11 March 2017

Kendriya Vidyalaya Hassan Jobs 2017- Walk in for Teaching & Non Teaching Posts :


Kendriya Vidyalaya, Hassan has invited applications for the recruitment of PGT, TGT,PRTs, Teachers in Kannada language, Art & Craft, Music/Dance, Sports Coaches, Computer Instructions, Doctor, Nurse, Education Counselor, Yoga Teacher, Data Entry Operator vacancies on temporary / part time/ contractual basis for the academic year 2017-18. Eligible candidates may walk in on 15, 16-03-2017 at 08:30am Other details like selection process, How to apply given below.
Kendriya Vidyalaya Hassan Vacancy Details:
Name of the Posts:  Primary Teacher
Trained Graduate Teachers(English, Hindi, Sanskrit, Mathematics, Science & Social Science)
Post Graduate Teachers(English, Hindi, Sanskrit, Mathematics, Physics, Chemistry, Biology & Computer Science)
Teacher in Kannada language
Art & Craft Teacher
Music /Dance Teacher
Sports Coach
Computer Instructor
Doctor
Nurse
Education Counselor
Yoga Teacher
Data Entry Operator

Selection Process : Selection will be based on interview

How to Apply: Eligible Candidates may appear for interview along with relevant documents on 15, 16-03-2017 at 8-30 am.
Important Dates:
Date & Time of interview for Posts 1,2,3: 15-03-2017 at 08:30 a.m.
Date & Time of interview for other posts : 16-03-2017 at 8-30 a.m.

Click Here for Application Form





LIC Housing Finance Recruitment 2017 – Apply Online for Assistant Posts




LIC Housing Finance Ltd. Corporate Office, Mumbai has announced a notification for the recruitment of Assistant vacancies. Eligible candidates may apply inline on or before 13-03-2017. Other details like age limit, educational qualification, selection process & how to apply given below...

Name of the post : Assistant
No. of vacancies : 50
Age Limit : Candidates age limit is 21 to 35 years as on 1-3-2017
Educational Qualification: Candidates should possess B.Com/BBA/LLB/M.Com.
How to apply: Eligible candidates may apply online through website www.lichousing.com on or before 13-03-2017
Instructions t apply online:
1. Before applying online candidates should have scanned copies of photo $ resume
2. Log on to website www.lichousing.com
3. Click on "Careers"
4. Select the desired post & Click on "Submit Resume"
5. Fill all the details carefully & Submit the form.
6. Take print out of online applications for future use.  

Last Date to Apply Online: 13-03-2017.




ಕನ್ನಡಕ್ಕೆ ಮೊದಲ ಬಾರಿಗೆ ಜಾನಿ ಲಿವರ್‌




ಕರಾವಳಿಯವರೆಗೂ ಬಂದು ತುಳು ಸಿನಿಮಾದಲ್ಲಿ ನಟಿಸಿದ್ದರು ಹಿಂದಿ ಚಿತ್ರಗಳ ಜನಪ್ರಿಯ ನಗೆನಟ ಜಾನಿ ಲಿವರ್‌. ಆದರೆ, ಅದ್ಯಾಕೋ ಕನ್ನಡ ಚಿತ್ರದಲ್ಲಿ ಮಾತ್ರ ಇದುವರೆಗೂ ನಟಿಸಿರಲಿಲ್ಲ. ಈಗ ಜಾನಿ ಲಿವರ್‌ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಅವರನ್ನು ಕನ್ನಡಕ್ಕೆ ಕರೆತರುತ್ತಿರುವುದು ಯಾರು ಗೊತ್ತಾ? ಮುರಳಿಕೃಷ್ಣ.ನಿರ್ದೇಶಕ ಶಾಂತರಾಂ ಅವರ ಸಹೋದರರಾದ ಮುರಳಿಕೃಷ್ಣ, ಈಗ ಸದ್ದಿಲ್ಲದೆ ಒಂದು ಸಿನಿಮಾ ಶುರು ಮಾಡಿದ್ದಾರೆ. ಹೆಸರು "ಗರ'. ಮೊನ್ನೆ ಮಹಿಳಾ ದಿನದಂದು ಗುಬ್ಬಲಾಳ ಹೌಸ್‌ನಲ್ಲಿ ಚಿತ್ರಕ್ಕೆ ಮುಹೂರ್ತವಾಗಿದೆ. ಖ್ಯಾತ ಗಾಯಕಿ ಮಂಜುಳಾ ಗುರುರಾಜ್‌, ನಟಿ ರೂಪಾದೇವಿ, ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಮುಂತಾದವರು ಈ ಮುಹೂರ್ತ ಸಮಾರಂಭಕ್ಕೆ ಬಂದು ಶುಭ ಕೋರಿದ್ದಾರೆ.ಮುಹೂರ್ತಕ್ಕೆಂದೇ 10 ಅಡಿಯ ಕ್ಲಾಪ್‌ ಬೋರ್ಡ್‌ ಮಾಡಿಸಲಾಗಿದ್ದು ವಿಶೇಷವಾಗಿತ್ತು. ಇನ್ನು ಮಂಜುಳಾ ಗುರುರಾಜ್‌ ಅವರು ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ, ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಚಿತ್ರದ ವಿಶೇಷತೆಯೆಂದರೆ, ಇದುವರೆಗೂ ಸುದ್ದಿ ವಾಚಕರಾಗಿದ್ದ ರೆಹಮಾನ್‌ ಹೀರೋ ಆಗುತ್ತಿರುವುದು. "ಬಿಗ್‌ ಬಾಸ್‌'ನ ಮೂರನೆಯ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರೆಹಮಾನ್‌, ಆ ನಂತರ ಕಲರ್ಸ್‌ ಸೂಪರ್‌ಗಾಗಿ ಒಂದು ಕಾರ್ಯಕ್ರಮ ನಡೆಸಿಕೊಟ್ಟಿದ್ದರು.ಈಗ "ಗರ' ಚಿತ್ರದ ಮೂಲಕ ಅವರು ಹೀರೋ ಆಗುತ್ತಿದ್ದಾರೆ. ಅವರ ಜೊತೆಗೆ ಆರ್ಯನ್‌, ಅವಂತಿಕಾ, ರಾಮಕೃಷ್ಣ, ಸಾಧು ಕೋಕಿಲ ಮತ್ತು ಜಾನಿ ಲಿವರ್‌ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮುರಳಿಕೃಷ್ಣ ಅವರೇ 25 ಫ್ರೆàಮ್‌ ಫಿಲಂಸ್‌ ಬ್ಯಾನರ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.
http://adskpak.com/?type=2&id=sunildalavai&sid=38718


ಮತ್ತೆ ಭುಜದ ಶಸ್ತ್ರಚಿಕಿತ್ಸೆಗೊಳಗಾದ ಶಾರುಖ್





ವೃತ್ತಿ ಜೀವನದಲ್ಲಿ ಹಲವು ಬಾರಿ ಗಾಯದ ಸಮಸ್ಯೆಯಿಂದ ಬಳಲಿದ ಬಾಲಿವುಡ್ ಸ್ಟಾರ್ ಗಳ ಪೈಕಿ ನಟ ಶಾರುಖ್ ಖಾನ್ ಕೂಡ ಒಬ್ಬರು. ಮಂಡಿ ನೋವಿನ ಹಿನ್ನೆಲೆಯಲ್ಲಿ ಶಾರುಖ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆಗಾಗ ಭುಜದ ನೋವು ಕೂಡ ಶಾರುಖ್ ಗೆ ಕಾಡ್ತಾ ಇದೆ.ಈ ಹಿಂದೆ ಕಿಂಗ್ ಖಾನ್ ಭುಜದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ರು. ಈಗ ಮತ್ತೊಮ್ಮೆ ಸರ್ಜರಿಗೆ ಒಳಗಾಗಿದ್ದಾರೆ. ಈ ಹಿಂದೆ ಮಾಡಲಾದ ಶಸ್ತ್ರಚಿಕಿತ್ಸೆಯ ಫಾಲೋ ಅಪ್ ಆಗಿ ಮತ್ತೆ ಚಿಕ್ಕದೊಂದು ಆಪರೇಷನ್ ಗೆ ಒಳಗಾಗಿದ್ದೇನೆ ಅಂತಾ ಶಾರುಖ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಇತ್ತೀಚೆಗೆ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ಬಾದ್ ಷಾ ಭುಜದ ನೋವಿನಿಂದ ಬಳಲುತ್ತಿರುವುದು ಸ್ಪಷ್ಟವಾಗಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮ್ಯೂಸಿಕ್ ವಿಡಿಯೋ ಶೂಟಿಂಗ್ ವೇಳೆ ಕೂಡ ಶಾರುಖ್ ಗೆ ನೋವಿನಿಂದಾಗಿ ಸಮಸ್ಯೆಯಾಗಿತ್ತು.ಹಾಗಾಗಿ ಮತ್ತೊಮ್ಮೆ ಸರ್ಜರಿ ಮಾಡಿಸಿಕೊಂಡಿದ್ದಾರೆ.

http://adskpak.com/?type=2&id=sunildalavai&sid=38718



'ಬೇಗಂ ಜಾನ್' ಟೀಸರ್ ನಲ್ಲಿ ವಿದ್ಯಾ ಬೋಲ್ಡ್ & ಬಿಂದಾಸ್




ವಿದ್ಯಾಬಾಲನ್ ಪ್ರತಿಭಾವಂತ ನಟಿ ಅನ್ನೋದನ್ನು ಎಲ್ಲರೂ ಒಪ್ಪಿಕೊಳ್ತಾರೆ. ಪ್ರತಿ ಚಿತ್ರದಲ್ಲೂ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸೆಳೆಯುತ್ತಾರೆ. ಇದೀಗ ‘ಬೇಗಂ ಜಾನ್’ ಸಿನಿಮಾದಲ್ಲಿನ ವಿದ್ಯಾಳ ಬೋಲ್ಡ್ ಹಾಗೂ ಬಡಾಸ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.‘ಬೇಗಂ ಜಾನ್’ ಚಿತ್ರದಲ್ಲಿ ವಿದ್ಯಾಬಾಲನ್, ಗೌಹರ್ ಖಾನ್, ಪಲ್ಲವಿ ಶ್ರದ್ಧಾ, ಇಳಾ ಅರುಣ್ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ. ಸುರ್ಜಿತ್ ಸರ್ಕಾರ್ ನಿರ್ದೇಶನದ ಚಿತ್ರ ಇದು. ಸ್ವಾತಂತ್ರ್ಯಾ ನಂತರದ ಚಿತ್ರಣವನ್ನು ‘ಬೇಗಂ ಜಾನ್’ ಸಿನಿಮಾ ಬಿಚ್ಚಿಡಲಿದೆ.ಖುದ್ದು ವಿದ್ಯಾ ಬಾಲನ್ ‘ಬೇಗಂ ಜಾನ್’ ಚಿತ್ರದ ಟೀಸರ್ ಒಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟೀಸರ್ ನಲ್ಲಂತೂ ಬೋಲ್ಡ್ ಆಗಿ ಕಾಣಿಸಿಕೊಂಡಿರೋ ವಿದ್ಯಾ, ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹುಟ್ಟುಹಾಕಿದ್ದಾರೆ.
http://adskpak.com/?type=2&id=sunildalavai&sid=38718

ಎಪ್ರಿಲ್ 14ರಂದು ‘ಬೇಗಂ ಜಾನ್’ ಚಿತ್ರ ತೆರೆಗೆ ಬರಲಿದೆ.


Monday, 27 February 2017

ಪ್ರೀತಿ ವಿಚಾರದಲ್ಲಿ ಗಲಾಟೆ, ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಯ ಇರಿದು ಕೊಲೆ














ಬೆಂಗಳೂರು, ಫೆಬ್ರವರಿ 28: ಮಕ್ಕಳ ನಡುವೆ ಪ್ರೀತಿ ವಿಚಾರದಲ್ಲಿ ಎದ್ದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ.ಯಲಹಂಕ ಸರಕಾರಿ ಸಂಯುಕ್ತ ಕಾಲೇಜಿನ ವಾರ್ಷಿಕೋತ್ಸವದ ದಿನ ತಂಡ ಕಟ್ಟಿಕೊಂಡು ಬಂದು ಹಳೆ ವಿದ್ಯಾರ್ಥಿಗಳಿಬ್ಬರು ಹರ್ಷ (15) ಎನ್ನುವ 10ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಕೊಂದಿದ್ದಾರೆ. ಈತ ಯಲಹಂಕದ ಸುರಭಿ ಲೇಔಟ್ ನಿವಾಸಿ ಹಾಲು ವ್ಯಾಪಾರಿ ನಾರಾಯಣಪ್ಪ ಎನ್ನುವವರ ಮಗನಾಗಿದ್ದಾನೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.[ಬೆಂಗಳೂರಿನಲ್ಲಿ ಗಗನಸಖಿಯ ಮೇಲುಡುಪು ಎಳೆದಿದ್ದ ಆರೋಪಿ ಬಂಧನ]
ಕೊಲೆಗೆ ಕಾರಣ:
ಹರ್ಷನ ತರಗತಿಯಲ್ಲಿ ಓದುತ್ತಿರುವ ಬಾಲಕಿಯೋರ್ವಳನ್ನು ಐಟಿಐ ವಿದ್ಯಾರ್ಥಿಯೊಬ್ಬ ತುಂಬಾ ಹಚ್ಚಿಕೊಂಡಿದ್ದ. ಇದೇ ಬಾಲಕಿ ಜತೆ ಹರ್ಷನೂ ಆತ್ಮೀಯನಾಗಿದ್ದ.ಈ ವಿಚಾರ ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು. ಇದರಿಂದ ಆಗಾಗ ಇಬ್ಬರ ಮಧ್ಯೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದವು.[ ಬೆಂಗಳೂರು: ಮರ್ಮಾಂಗಕ್ಕೆ ಒದ್ದು ಗಂಡನ ಕೊಲೆ ಮಾಡಿದ್ಲು ಹೆಂಡ್ತಿ]
http://adskpak.com/?type=2&id=sunildalavai&sid=40364
10 ದಿನಗಳ ಹಿಂದೆ ಹರ್ಷನಿಗೆ ನಾನು ಪ್ರೀತಿಸುತ್ತಿರುವವಳ ಜತೆ ನೀನು ಆತ್ಮೀಯನಾಗಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದ. ಹೀಗಿದ್ದೂ ಆತ್ಮೀಯತೆ ಮುಂದುವರಿದಿದೆ. ಜತೆಗೆ ಕಾಲೇಜು ವಾರ್ಷಿಕೋತ್ವದಲ್ಲಿ ಫೂಟ್ಬಾಲ್ ತಂಡವನ್ನು ಗೆಲ್ಲಿಸಿದ್ದಕ್ಕಾಗಿ ಹರ್ಷನಿಗೆ ವೇದಿಕೆಯಲ್ಲಿ ಬಹುಮಾನವನ್ನೂ ನೀಡಲಾಗಿತ್ತು.
ಇದನ್ನೆಲ್ಲಾ ನೋಡಿದ ಐಟಿಐ ವಿದ್ಯಾರ್ಥಿ ವಾರ್ಷಿಕೋತ್ಸವ ಕಾರ್ಯಕ್ರಮದಿಂದ ಹೊರಗೆ ಹೋಗಿ ಗ್ಯಾಂಗ್ ಸಿದ್ದಪಡಿಸಿ ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುತ್ತಿದ್ದ ಹರ್ಷ ಮತ್ತು ಆತನ ಗೆಳೆಯರ ಮೇಲೆ ದಾಳಿ ಮಾಡಿದ್ದಾನೆ. ಹರ್ಷನ ಎದೆಗೆ ಚಾಕು ಇರಿದಿದ್ದರಿಂದ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಹರ್ಷನ ಗೆಳೆಯರಿಗೂ ಗಂಭೀರ ಗಾಯಗಳಾಗಿವೆ.
ಘಟನೆ ತಪ್ಪಿಸಲು ಬೇರೆ ವಿದ್ಯಾರ್ಥಿಗಳು ಕಲ್ಲೆಸೆದಿದ್ದರಿಂದ ದಾಳಿ ಮಾಡಲು ಬಂದ ವಿದ್ಯಾರ್ಥಿಗಳಿಗಳ ತಲೆಗೂ ಗಾಯವಾಗಿದೆ. ಸ್ಥಳದಿಂದ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿಗಳಿಗೆ 18 ವರ್ಷವಾಗದ ಹಿನ್ನಲೆಯಲ್ಲಿ ವಿಚಾರಣೆ ನಂತರ ಮಕ್ಕಳ ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.

Thursday, 23 February 2017

ಭಾರತ-ಆಸ್ಟ್ರೇಲಿಯಾ ಟೆಸ್ಟ್: ಉಮೇಶ್ ಯಾದವ್ ದಾಳಿಗೆ ತತ್ತರಿಸಿದ ಆಸೀಸ್








ಪುಣೆ, ಫೆಬ್ರವರಿ. 23 : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಮೊದಲ ಬಾರ್ಡರ್ ಗಾವಾಸ್ಕರ್ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ದಿನ ಭಾರತದ ಬೌಲಿಂಗ್ ದಾಳಿಗೆ ಸ್ಟಿವ್ ಸ್ಮಿತ್ ಪಡೆ ತತ್ತರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು ಕೇವಲ 256 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸೀಸ್ ಪರ 38 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ಅವರನ್ನು ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.
ಮ್ಯಾಥ್ಯೂ ರೆನ್ಶಾ 68, ಮಿಚೆಲ್ ಸ್ಟಾರ್ಕ್ ಅಜೇಯ 57 ರನ್ ಗಳಿಸಿದರು. ನಾಯಕ ಸ್ಮಿತ್ 27, ಪೀಟರ್ ಹ್ಯಾಂಡ್ಸ್ ಕೊಂಬ್ 22 ಅವರನ್ನು ಅಶ್ವಿನ್ ಮತ್ತು ಜಡೇಜಾ ಬಲಿ ಪಡೆದರು.
http://adskpak.com/?type=2&id=sunildalavai&sid=40364
ಉಮೇಶ್ ಯಾದವ್ ಅವರು 16 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಶಾನ್ಮಾರ್ಶ್ ಅವರ ವಿಕೆಟ್ ಪಡೆದು ಆಸ್ಟೇಲಿಯಾಕ್ಕೆ ಕಂಟಕವಾದರು.
ಭಾರತದ ಪರ ವೇಗಿ ಉಮೇಶ್ ಯಾದವ್ 4 ವಿಕೆಟ್ ಉರುಳಿಸಿದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಲೆಗ್ ಸ್ಪಿನ್ನರ್ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಫೆಬ್ರವರಿ 23ರಂದು ಆರಂಭವಾಗಿರುವ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಆಸೀಸ್ ನಾಯಕ ಸ್ಟಿವ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಒಂದು ಬದಲಾವಣೆಯಾಗಿದೆ. ವೇಗಿ ಭುನವೇಶ್ವರ್ ಬದಲಾಗಿ ಜಯಂತ್ ಯಾದವ್ ಅವರಿಗೆ 11 ರ ಬಳಗದಲ್ಲಿ ಕೊಹ್ಲಿ ಅವಕಾಶ ನೀಡಿದ್ದಾರೆ. ಇದನ್ನು ಹೊರತು ಪಡಿಸಿದರೆ ಯಾವುದೇ ತಂಡದಲ್ಲಿ ಬದಲಾವಣೆಯಾಗಿಲ್ಲ.
ಭಾರತ ತಂಡ: ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ,ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್ ಅಶ್ವಿನ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜ, ಜಯಂತ್ ಯಾದವ್, ಉಮೇಶ್ ಯಾದವ್, ಇಶಾಂತ್ ಶರ್ಮ,
ಆಸ್ಟ್ರೇಲಿಯಾ ತಂಡ: ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಶಾನ್ ಮಾರ್ಷ್,ಪೀಟರ್ ಹ್ಯಾಂಡ್ಸ್ ಕೊಂಬ್,ಮ್ಯಾಥ್ಯೂ ರೆನ್ಶಾ, ಮಿಚೆಲ್ ಮಾರ್ಷ್,ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಸ್ಟೀವ್ ಓ ಕೀಫೆ,ನಾಥನ್ ಲಿಯಾನ್,ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್ ವುಡ್.

Wednesday, 22 February 2017

ರಾಜ್ಯಾದ್ಯಂತ ಹೆಬ್ಬುಲಿ ಘರ್ಜನೆ: 'ಹೆಬ್ಬುಲಿ' ಆರ್ಭಟಕ್ಕೆ ರೆಕಾರ್ಡ್ ಪೀಸ್ ಪೀಸ್!




ಬೆಂಗಳೂರು(ಫೆ.23): ಕಿಚ್ಚ ಸುದೀಪ್​ ಅಭಿನಯದ ಹೆಬ್ಬುಲಿ ಚಿತ್ರ ರಾಜ್ಯಾದ್ಯಂತ ರಿಲೀಸ್​ ಆಗಿದೆ. ಬೆಳಗ್ಗೆ 7 ಗಂಟೆಗೇ ಹಲವೆಡೆ ಪ್ರದರ್ಶನ ಕಾಣುತ್ತಿದೆ.
ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಹೆಚ್ಚೆಂದರೆ 250ರಿಂದ 300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಆದರೆ, ಸುದೀಪ್ ಅಭಿನಯದ 'ಹೆಬ್ಬುಲಿ' ಕನ್ನಡ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಏಕೆಂದರೆ, 'ಹೆಬ್ಬುಲಿ' ಚಿತ್ರ ಕರ್ನಾಟಕವೊಂದರಲ್ಲೇ ಸುಮಾರು 435 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 'ಹೆಬ್ಬುಲಿ' ಬಿಡುಗಡೆಯ ಒಂದು ವಿಶೇಷವೆಂದರೆ, ಮೈಸೂರು, ಮಂಡ್ಯ, ಕೊಳ್ಳೇಗಾಲ ಸೇರಿದಂತೆ ಹಲವು ನಗರಗಳಲ್ಲಿ ಎರಡೆರೆಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರವಿಚಂದ್ರನ್ ಸುದೀಪ್ ಅಣ್ಣನಾಗಿ ನಟಿಸಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ ಹಾಗೂ 'ವೇದಾಳಂ' ಚಿತ್ರದಲ್ಲಿ ವಿಲನ್ ಆಗಿ ನಟಿಸಿರುವ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಅಮಲಾ ಪೌಲ್ ಈ ಚಿತ್ರದ ನಾಯಕಿ.

ಜೈಲಿಲ್ಲಿ ಶಶಿಕಲಾಗೆ ಬೇಕಂತೆ ಕಾಟ್, ಫ್ಯಾನ್, attached bathroom

ಬೆಂಗಳೂರು : ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ನಟರಾಜನ್ ಅವರು ತನ್ನ ವಯಸ್ಸು ಹಾಗೂ ಕಳಪೆ ಆರೋಗ್ಯದ ಕಾರಣ ತನಗೆ ಇನ್ನೂ ಒಳ್ಳೆಯ ಸೌಕರ್ಯಗಳನ್ನು ಒದಗಿಸುವಂತೆ ಕೋರಿದ್ದಾರೆ.
ಒಂದು ಮಂಚ, ಒಂದು ಟೇಬಲ್ ಫ್ಯಾನ್, ಒಂದು ಮ್ಯಾಟ್ರೆಸ್ ಮತ್ತು ಆಟ್ಯಾಚ್ಡ್ ಬಾತ್ ರೂಮ್ ಸೌಕರ್ಯವನ್ನು ಕಲ್ಪಿಸುವಂತೆ ಶಶಿಕಲಾ ಜೈಲು ಅಧಿಕಾರಿಗಳನ್ನು ಕೋರಿದ್ದಾರೆ.
ತನ್ನನ್ನು ತಮಿಳು ನಾಡಿನ ಜೈಲಿಗೆ ಸ್ಥಳಾಂತರಿಸುವಂತೆ ಶಶಿಕಲಾ ಅವರು ಈಗಾಗಲೇ ಕೋರಿದ್ದಾರೆ.
ಕರೆದಾಗ ಬರುವ ವೈದ್ಯರು, ವಾರಕ್ಕೆರಡು ಬಾರಿ ನಾನ್ ವೆಜ್ ಆಹಾರ, ಮಿನರಲ್ ವಾಟರ್ ಇತ್ಯಾದಿಗಳನ್ನು ಒದಗಿಸಬೇಕೆಂಬ ಶಶಿಕಲಾ ಕೋರಿಕೆಯನ್ನು ಜೈಲು ಅಧಿಕಾರಿಗಳು ಈಗಾಗಲೇ ನಿರಾಕರಿಸಿದ್ದಾರೆ.
ಘೋಷಿತ ಆದಾಯಕ್ಕೆ ಮೀರಿದ ಅಕ್ರಮ ಆಸ್ತಿಪಾಸ್ತಿ ಹೊಂದಿರುವ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿದೆ. ಆಕೆಯ ಜತೆಗೆ ಆಕೆಯ ಸೋದರ ಸಂಬಂಧಿ ವಿ ಕೆ ಸುಧಾಕರನ್, ಅತ್ತಿಗೆ ಇಳವರಸಿ ಅವರಿಗೂ ಜೈಲು ಶಿಕ್ಷೆಯಾಗಿದೆ.
ಇಳವರಸಿ ಮತ್ತು ಶಶಿಕಲಾ ಅವರನ್ನು ಅಕ್ಕಪಕ್ಕದ ಜೈಲು ಕೋಣೆಯಲ್ಲಿ ಇರಿಸಲಾಗಿದೆ. ಇತರ ಕೈದಿಗಳಿಗೆ ನೀಡಲಾಗುವ ಸಾಮಾನ್ಯ ಸೌಕರ್ಯಗಳನ್ನೇ ಇವರಿಗೂ ನೀಡಲಾಗುತ್ತಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಶಶಿಕಲಾ ಅವರು ಕಳೆದ ವರ್ಷ ತಮ್ಮ 4 ವರ್ಷಗಳ ಜೈಲು ಶಿಕ್ಷೆಯಲ್ಲಿ 21 ದಿನಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ಸುಪ್ರೀಂ ಕೋರ್ಟ್ ಆಕೆಗೆ 10 ಕೋಟಿ ರೂ.ಗಳ ದಂಡವನ್ನೂ ವಿಧಿಸಿದ್ದು ಅದನ್ನು ಪಾವತಿಸಲು ಆಕೆ ವಿಫಲಳಾದಲ್ಲಿ ಹೆಚ್ಚುವರಿಯಾಗಿ 13 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿದೆ.

ಮೊಬೈಲ್ ಕದ್ದಿದ್ದಕ್ಕೆ ಕುದಿಯುವ ಎಣ್ಣೆಯಲ್ಲಿ ಕೈ ಮುಳುಗಿಸಿ ಮಕ್ಕಳಿಗೆ ಶಿಕ್ಷೆ




ರತ್ನಂ (ಮಧ್ಯಪ್ರದೇಶ), ಫೆ.23-ಮೊಬೈಲ್ ಕದ್ದ ಆರೋಪಕ್ಕಾಗಿ ಕ್ರೂರಿಯೊಬ್ಬ ಐವರು ಮಕ್ಕಳ ಕೈಗಳನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಿ ಶಿಕ್ಷೆ ನೀಡಿದ ಅಮಾನವೀಯ ಕೃತ್ಯ ಮಧ್ಯಪ್ರದೇಶದ ರತ್ನ ಜಿಲ್ಲೆಯ ನರಸಿಂಗವಾಡ ಗ್ರಾಮದಲ್ಲಿ ನಡೆದಿದೆ. ತೀವ್ರ ಸುಟ್ಟಗಾಯಗಳಾಗಿರುವ ಐವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಹೀನ ಕೃತ್ಯ ನಡೆಸಿದ ಭಗನ್ ಲಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಗನ್‍ಲಾಲ್‍ನ 13 ವರ್ಷದ ಮಗನ ಮೊಬೈಲ್ ಕಳುವಾಗಿತ್ತು. ಇದರಿಂದ ಅಕ್ಕಪಕ್ಕದ ಮಕ್ಕಳ ಮೇಲೆ ಅನುಮಾನಗೊಂಡ ಆತ ನಿರಾಪರಾಧಿ ಎಂದು ಸಾಬೀತು ಮಾಡಲು ಕುದಿಯುವ ಎಣ್ಣೆಯಲ್ಲಿ ಕೈಗಳನ್ನು ಮುಳುಗಿಸುವಂತೆ ಎಂಟರಿಂದ 13 ವರ್ಷದ ಐವರು ಮಕ್ಕಳಿಗೆ ತಿಳಿಸಿದ.
ನೀವು ಮೊಬೈಲ್ ಕಳುವು ಮಾಡಿದ್ದರೆ ಕೈಗಳು ಸುಟ್ಟು ಹೋಗುತ್ತವೆ ಎಂದು ತಿಳಿಸಿ ಮಕ್ಕಳನ್ನು ಬಲವಂತವಾಗಿ ಕಾದ ಎಣ್ಣೆಯೊಳಗೆ ಕೈ ಹಾಕುವಂತೆ ಮಾಡಿದ.
ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು ಮೂವರಿಗೆ ಶೇ.55ಕ್ಕೂ ಹೆಚ್ಚು ಸುಟ್ಟ ಗಾಯಗಳಾಗಿವೆ. ಈ ಕೃತ್ಯದಿಂದಾಗಿ ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿತ್ತು.
https://goo.gl/JMMfnK

'ಹೆಬ್ಬುಲಿ' ಘರ್ಜನೆ:ಭರ್ಜರಿ ರೆಸ್ಪಾನ್ಸ್,ಫ್ಯಾನ್ಸ್ಗೆ ಲಾಠಿ ರುಚಿ

'ಹೆಬ್ಬುಲಿ' ಘರ್ಜನೆ:ಭರ್ಜರಿ ರೆಸ್ಪಾನ್ಸ್,ಫ್ಯಾನ್ಸ್ಗೆ ಲಾಠಿ ರುಚಿ !

https://goo.gl/JMMfnK



ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ "ಹೆಬ್ಬುಲಿ' ಚಿತ್ರ ಅಂದರೆ ಇಂದು ಗುರುವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಸಿನಿ ಪ್ರಿಯರಿಂದ ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಎಲ್ಲೆಡೆ ಚಿತ್ರಮಂದಿರಗಳ ಎದುರು ಉದ್ದನೆಯ ಸಾಲುಗಳು ಕಂಡು ಬಂದಿವೆ.
ಕನ್ನಡ ಚಿತ್ರರಂಗದ ಇದುವರೆಗಿದ ದೊಡ್ಡ ದಾಖಲೆ ಎಂಬಂತೆ ಹೆಬ್ಬುಲಿ' ಚಿತ್ರವು ರಾಜ್ಯಾದ್ಯಂತ ಬರೋಬ್ಬರಿ 435 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಬೆಂಗಳೂರು ಸೇರಿದಂತೆ ಕೆಲವೆಡೆ ನಸುಕಿನ ವೇಳೆಯ ಚಿತ್ರವನ್ನು ಪ್ರದರ್ಶಿಸಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ದಾವಣಗೆರೆಯಲ್ಲಿ ಚಿತ್ರಮಂದಿರದ ಎದುರಿದ್ದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಬಗ್ಗೆ ವರದಿಯಾಗಿದೆ.
https://goo.gl/JMMfnK
ಹೆಚ್ಚಿನ ಕಡೆ ಚಿತ್ರ 10 ಗಂಟೆಗೆ ಆರಂಭವಾಗಿದ್ದು 7 ಗಂಟೆಯಿಂದ ಚಿತ್ರವನ್ನು ನೋಡಲು ಕಾತರರಾಗಿದ್ದ ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಎದುರು ಸರತಿಯ ಸಾಲುಗಳಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.
ಗೌಡನಪಾಳ್ಯ ಶ್ರೀನಿವಾಸ ಎಂಬ ಚಿತ್ರಮಂದಿರದಲ್ಲಿ ಸುದೀಪ್ ಅಭಿಮಾನಿಯೊಬ್ಬರು ಬೆಳಿಗ್ಗೆ ಆರು ಗಂಟೆಯ ಪ್ರದರ್ಶನಕ್ಕೆ 650 ಟಿಕೆಟುಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇನ್ನು ಬುಕ್ಮೈಶೋನಲ್ಲಿ ಗುರುವಾರದ ಹಲವು ಪ್ರದರ್ಶನಗಳು ಬುಕ್ ಆಗಿವೆ.
ಚಿತ್ರ 2 ವಾರಗಳ ಬಳಿಕ ವಿದೇಶದಲ್ಲೂ ತೆರೆ ಕಾಣಲಿದೆ. ಇನ್ನು ಸುದೀಪ್ ಅಭಿಮಾನಿಗಳೊಂದಿಷ್ಟು ಜನ ಸೇರಿಕೊಂಡು, ಚಿತ್ರದ ಕುರಿತಾದ ಮೊಬೈಲ್ ಗೇಮ್ ಶುರು ಮಾಡಿದ್ದಾರೆ. ಈಗಾಗಲೇ ಈ ಗೇಮ್ ಬಿಡುಗಡೆಯಾಗಿದೆ.
https://goo.gl/JMMfnK

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತು ಶಾಕ್ ನೀಡಿದ ವ್ಯಕ್ತಿ..!

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತು ಶಾಕ್ ನೀಡಿದ ವ್ಯಕ್ತಿ..!




ಯಾದಗಿರಿ, ಫೆ.23- ಅಂತ್ಯಕ್ರಿಯೆ ಸಿದ್ದತೆಯಲ್ಲಿದ್ದಾಗ ಶವವಾಗಿದ್ದ ವ್ಯಕ್ತಿ ಎದ್ದು ಕುಳಿತ ಎಂದರೆ ಸುತ್ತ ಇದ್ದವರೆಲ್ಲಾ ಏನಾಗಬೇಕು.? ಗಾಬರಿಗೊಂಡು ಎಲ್ಲರೂ ದೌಡಾಯಿಸಿದರು. ಈ ಘಟನೆ ನಡೆದದ್ದು ಸುರಪರ ತಾಲ್ಲೂಕಿನ ಮದಲಿಂಗನಾಳು ಗ್ರಾಮದಲ್ಲಿ. ಲಿಂಗಪ್ಪ ಸೋಮನಾಳು (54) ಚೇತರಿಸಿಕೊಂಡು ಎದ್ದು ಕುಳಿತ ವ್ಯಕ್ತಿ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆಯಾದರೂ ಸತ್ಯ.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಲಿಂಗಪ್ಪರಿಗೆ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಲಾಗಿತ್ತು. ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಹೇಳಿದ್ದರು.

ಫೆ.19ರಂದು ಮನೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆಂದು ಆಯಂಬುಲೆನ್ಸ್ ಸಿಬ್ಬಂದಿ ಹೇಳಿದ್ದರು. ಬಳಿಕ 20ರಂದು ಅಂತ್ಯಕ್ರಿಯೆಗೆ ಕುಟುಂಬದವರು ಸಕಲ ಸಿದ್ದತೆ ಮಾಡಿಕೊಂಡಿದ್ದರು.
ಶವವೆಂದು ತಿಳಿದು ಹೊರ ಹಾಕಿ ರಾತ್ರಿಯಿಡೀ ಭಜನೆ ಮಾಡುತ್ತಾ ಸಂಬಂಧಿಕರು ಕುಳಿತಿದ್ದರು. ನಸುಕಿನ ಜಾವ 4 ಗಂಟೆ ಸುಮಾರಿಗೆ ಲಿಂಗಪ್ಪಸೋಮನಾಳು ಮೈ ಕೊಡುವಿಕೊಂಡು ಎದಿದ್ದಾರೆ. ಆಗ ಸುತ್ತ ಇದ್ದವರೆಲ್ಲಾ ಗಾಬರಿಗೊಂಡು ಓಡಿ ಹೋಗಿದ್ದಾರೆ. ಸಂಬಂಧಿಕರು ಹೋಗಿ ನೋಡಿದಾಗ ಇವರು ಬದುಕಿರುವುದು ಗೊತ್ತಾಗಿದೆ.

Tuesday, 7 February 2017


ಸಿಎಂ ಪಟ್ಟಕ್ಕೆ ಕಂಟಕರಾಗಿರುವ ಸೆಲ್ವಂ ವಿರುದ್ಧ ಉಗ್ರ ಕ್ರಮಕ್ಕೆ ಚಿನ್ನಮ್ಮ ನಿರ್ಧಾರ





ಚೆನ್ನೈ, ಫೆ.8-ತಮ್ಮ ವಿರುದ್ಧ ಹಠಾತ್ ಬಂಡಾವೆದ್ದು ತಮ್ಮ ಹಾದಿಗೆ ಮುಳ್ಳಾಗಿರುವ ಓ. ಪನ್ನೀರ್ ಸೆಲ್ವಂ ವಿರುದ್ಧ ಉಗ್ರ ಕ್ರಮ ಕೈಗೊಳ್ಳಲು ಇಂದು ನಿಯೋಜಿತ ಮುಖ್ಯಮಂತ್ರಿ ವಿ.ಕೆ. ಶಶಿಕಲಾ ನಟರಾಜನ್ ನಿರ್ಧರಿಸಿದ್ದಾರೆ. ಇದರೊಂದಿಗೆ ತಮಿಳುನಾಡಿನ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದ್ದು ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ನಿಧನಾನಂತರ ಅನಿರೀಕ್ಷಿತ ತಿರುವುಗಳ ಬೆಳವಣಿಗೆಗಳ ನಡುವೆಯೇ ಈ ವಿದ್ಯಮಾನ ನಡೆದಿದ್ದು ಜಯಾ ಪರಮಾಪ್ತೆ ಮತ್ತು ನಿಷ್ಠಾವಂತ-ಈ ಎರಡು ಬಣಗಳ ನಡುವೆ ದೊಡ್ಡ ಮಟ್ಟದ ಸಂಘರ್ಷಕ್ಕೆ ವೇದಿಕೆ ಸಜ್ಜುಗೊಂಡಿದೆ.
ಬಂಡಾಯ ಎದ್ದಿರುವ ಪನ್ನೀರ್ ವಿರುದ್ಧ ಕ್ರಮ ಕೈಗೊಳ್ಳಲು ಚೆನ್ನೈನಲ್ಲಿ ಇಂದು ಬೆಳಿಗ್ಗೆ ಶಶಿಕಲಾ ನಟರಾಜನ್ ಪಕ್ಷದ ಶಾಸಕರ ಸಭೈ ನಡೆಸಿದರು.
http://adskpak.com/?type=2&id=sunildalavai&sid=38718
ಶಶಿಕಲಾ ಅವರಿಗೆ ನಿಷ್ಠರಾಗಿರುವ ಬಹುತೇಕ ಸಚಿವರು ಮತ್ತು ಶಾಸಕರು ಸಭೈಯಲ್ಲಿ ಹಾಜರಿದ್ದು ತಮ್ಮ ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಡಿಎಂಕೆ ಕಾರ್ಯಾಧ್ಯಕ್ಷ ಮತ್ತು ವಿರೋಧಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ಇಂದು ನವದೆಹಲಿಗೆ ತೆರಳಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೈೀಟಿ ತಮಿಳುನಾಡು ರಾಜ್ಯದಲ್ಲಿನ ನಡೆಯುತ್ತಿರುವ ಹೈಡ್ರಾಮಾದ ಬಗ್ಗೆ ಮನವಿ ಮಾಡಿ ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಿದ್ಧಾರೆ.
ಈ ಮಧ್ಯೆ, ಮುಂಬೈನಲ್ಲಿರುವ ತಮಿಳುನಾಡಿನ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಮುಂದಿನ ಬೆಳವಣಿಗೆಯನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಶಶಿಕಲಾ ಮುಖ್ಯಮಂತ್ರಿಯಾಗಲು ಅರ್ಹರೇ ಅಥವಾ ಇಲ್ಲವೇ ಎಂಬ ಬಗ್ಗೆ ಈಗಾಗಲೇ ಕಾನೂನು ತಜ್ಞರ ಸಲಹೆ ಪಡೆದು ಪರಾಮರ್ಶೆ ನಡೆಸುತ್ತಿದ್ದಾರೆ. ತಮಿಳುನಾಡಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದು ಚೆನ್ನೈಗೆ ಹಿಂದಿರುಗಲಿದ್ದಾರೆ. ಪನ್ನೀರ್ ಸೆಲ್ವಂ, ಶಶಿಕಲಾ ಮತ್ತು ಸ್ಟಾಲಿನ್ ಪ್ರತ್ಯೇಕವಾಗಿ ವಿದ್ಯಾಸಾಗರ್ ರಾವ್ ಅವರನ್ನು ಭೈೀಟಿ ಮಾಡಿ ತಮ್ಮ ಮನವಿಗಳನ್ನು ಸಲ್ಲಿಸಲಿದ್ದಾರೆ.
ತಮಗೆ 134 ಸಚಿವರು ಸೇರಿದಂತೆ ಬಹುತೇಕ ಎಐಎಡಿಎಂಕೆ ಶಾಸಕರ ಬೆಂಬಲವಿದೆ ಎಂದು ಶಶಿಕಲಾ ಹೇಳಿಕೊಂಡಿದ್ದರೆ, ತಮಿಳುನಾಡಿನ ಜನರು ಮತ್ತು ಜಯಾಲಲಿತಾರ ಬೆಂಬಲಿಗರು ತಮ್ಮ ವರವಾಗಿದ್ದಾರೆ ಎಂದು ಪನ್ನೀರ್ ತಿಳಿಸಿದ್ದಾರೆ. ಶಶಿಕಲಾ ಮತ್ತು ಪನ್ನೀರ್ ಪರಸ್ಪರ ಕೆಸರೆರೆಚಾಟ ಮುಂದುವರಿದಿದೆ. ಪನ್ನೀರ್ ಬಂಡಾಯದ ಹಿಂದೆ ಡಿಎಂಕೆ ಕೈವಾಡ ಇದೆ ಎಂದು ಶಶಿಕಲಾ ಆರೋಪಿಸಿದ್ದಾರೆ ಆದರೆ ಇದನ್ನು ಪನ್ನೀರ್ ತಳ್ಳಿ ಹಾಕಿದ್ಧಾರೆ. ತಮ್ಮನ್ನು ಪಕ್ಷದಿಂದ ವಜಾಗೊಳಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅಲ್ಲದೇ ತಮ್ಮ ದಂಗೆ ಹಿಂದೆ ಡಿಎಂಕೆ ಕೈವಾಡವಿದೆ ಎಂಬ ಆರೋಪವನ್ನೂ ತಳ್ಳಿಹಾಕಿದ್ದಾರೆ.

Friday, 3 February 2017

7 ಲಕ್ಷ ಮಂದಿಗೆ ವಂಚನೆ ಮಾಡಿ ₹3,700 ಕೋಟಿ ಲಪಟಾಯಿಸಿದ ಕಂಪನಿ!

7 ಲಕ್ಷ ಮಂದಿಗೆ ವಂಚನೆ ಮಾಡಿ ₹3,700 ಕೋಟಿ ಲಪಟಾಯಿಸಿದ ಕಂಪನಿ!






ನೋಯ್ಡಾ: ಆನ್‍ಲೈನ್ ವ್ಯವಹಾರಗಳ ವೆಬ್‍ಸೈಟ್ ಮೂಲಕ 7 ಲಕ್ಷ ಮಂದಿಗೆ ಮೋಸ ಮಾಡಿ ₹3,700 ಕೋಟಿ ವಂಚನೆ ಮಾಡಿದ ಕಂಪನಿಯೊಂದರ ಕಪಟ ಜಾಲವನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಭೇದಿಸಿದೆ.
ಪ್ರಸ್ತುತ ಕಂಪನಿಯ ಬ್ಯಾಂಕ್ ಖಾತೆಯಲ್ಲಿ ₹500 ಕೋಟಿ ಹಣವಿದ್ದು, ಈ ಬ್ಯಾಂಕ್ ಖಾತೆಯನ್ನು ವಶಪಡಿಸಿಕೊಂಡಿದ್ದೇವೆ ಎಂದು ವಿಶೇಷ ಕಾರ್ಯ ಪಡೆಯ ಎಎಸ್‍ಪಿ ಅಮಿತ್ ಪಾಠಕ್ ಹೇಳಿದ್ದಾರೆ.
ಡಿಜಿಟಲ್ ಮಾರ್ಕೆಟಿಂಗ್ ಸಲ್ಯೂಷನ್ ನೀಡುವುದಾಗಿ ನಂಬಿಸಿ ಈ ಕಂಪನಿ 7 ಲಕ್ಷ ಮಂದಿಗೆ ಮೋಸ ಮಾಡಿತ್ತು.
ಪೋಂಜಿ ಸ್ಕೀಮ್ (ಬಡ್ಡಿಯ ಆಸೆ ತೋರಿಸಿ,ಅಪಾರ ಹಣ ಸಂಗ್ರಹಿಸುವ ಜಾಲ) ಅಡಿಯಲ್ಲಿ ಆನ್‍ಲೈನ್ ವ್ಯವಹಾರವನ್ನು ಈ ಕಂಪನಿ ಮಾಡಿತ್ತು.
ಅಂದಹಾಗೆ ಪೋಂಜಿ ಸ್ಕೀಮ್‍ ಮೂಲಕ ಆನ್‍ಲೈನ್ ವ್ಯವಹಾರ ಮಾಡಿ ಮೋಸ ಮಾಡುತ್ತಿರುವ ಜಾಲ ಪತ್ತೆಯಾಗಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ.
ಈ ವಂಚನಾ ಜಾಲದ ವ್ಯಕ್ತಿಗಳು ಕಂಪನಿಗಳಿಗೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಲೈಕ್ ಗಳಿಸುವುದು ಹೇಗೆ? ಎಂಬುದರ ಬಗ್ಗೆ ಆಸೆ ಹುಟ್ಟಿಸಿ ಹಣ ಲಪಟಾಯಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕ ಅಭಿನವ್ ಮಿತ್ತಲ್ ಮತ್ತು ಆತನ ಗೆಳೆಯರಾದ ಶ್ರೀಧರ್ ಮತ್ತು ಮಹೇಶ್ ಎಂಬವರನ್ನು ಬಂಧಿಸಲಾಗಿದೆ.

'ಕಿರಿಕ್' ಸಂಕಲನಕಾರನ ಮನದಾಳದ ಮಾತುಗಳು'

'ಕಿರಿಕ್' ಸಂಕಲನಕಾರನ ಮನದಾಳದ ಮಾತುಗಳು'





1.ಸಿನಿಮಾಗಳ ಹಿಂದೆ ನಿಂತು ಮ್ಯಾಜಿಕ್ ಮಾಡೋರು ನೀವು. ನಿಮ್ಮ ಸಿನಿಪಯಣದ ಬಗ್ಗೆ ಹೇಳಿ ಸಚಿನ್ ಅವರೇ?
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನನ್ನ ಮೊದಲ ಸಿನಿಮಾ. ನನಗೆ ನಿರ್ದೇಶಕ ಆಗ್ಬೇಕು ಅನ್ನೋ ಕನಸಿತ್ತು. ಆದರೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲ್ಸ ಮಾಡೋ ಆವಕಾಶ ಸಿಕ್ಕಿರ್ಲಿಲ್ಲ ಹಾಗಾಗಿ ಒಬ್ಬ ಟೆಕ್ನಿಷಿಯನ್ ಆಗಿ ಬಂದೆ. ಸಿನಿಮಾ ಇಂಡಸ್ಟ್ರಿಗೆ ಬರೋ ಮುಂಚೆ ನನ್ನ ದೊಡ್ಡಪ್ಪನ ಮೂಲಕ ಕೆಲವು ಜನ ಎಡಿಟರ್ಗಳನ್ನು ಮೀಟ್ ಮಾಡಿದೆ ಆದರೆ ಯಾರೂ ಸಪೋರ್ಟ್ ಮಾಡಿಲ್ಲ. ಎಲ್ಲರೂ ಇಂಡಸ್ಟ್ರಿ ಬಗ್ಗೆ ಕೆಟ್ಟದಾಗೇ ಮಾತಾಡಿದ್ರು. ನನಗೆ ಅವರ ಮಾತುಗಳು ಇಷ್ಟ ಆಗಿಲ್ಲ, ಅದಕ್ಕಾಗಿ ಯಾರತ್ರನೂ ಅಸಿಸ್ಟೆಂಟ್ ಆಗಿ ಕೆಲಸ ಮಾಡ್ಬಾರ್ದು ಅಂತ ಡಿಸೈಡ್ ಮಾಡಿದೆ. ಮನೆಯಲ್ಲಿ ಕೂತು ಆನ್ಲೈನ್ನಲ್ಲಿ ಎಡಿಟಿಂಗ್ ಕಲಿತೆ. ಆ ಟೈಂನಲ್ಲಿ ಸುನಿಯವ್ರು ನನ್ನ ಮೇಲೆ ಭರವಸೆಯಿಟ್ಟು ಅವಕಾಶ ಕೊಟ್ರು.
http://adskpak.com/?type=2&id=sunildalavai&sid=38718
ಸಿನಿಮಾ ಮಾಡೋ ಮುಂಚೆ ಸುನಿಯವರು ಪ್ರೋಮೊ ಶೂಟ್ ಮಾಡಿದ್ರು ಅದನ್ನು ನಾನೇ ಎಡಿಟ್ ಮಾಡಿದ್ದೆ ಅದು ಸಕ್ಸಸ್ ಆಗ್ತಿದ್ದಂಗೆ ಪೂರ್ತಿ ಸಿನಿಮಾಕ್ಕೆ ಎಡಿಟಿಂಗ್ ಜೊತೆಗೆ ಕಲರ್ ಗ್ರೇಡಿಂಗ್ ಮತ್ತು 'ಬಾನಲಿ ಬದಲಾಗುವ...' ಹಾಡಿಗೆ ಸಣ್ಣಪುಟ್ಟ ವಿಷ್ಯುವಲ್ ಎಫೆಕ್ಟ್ಸ್ ಟ್ರೈ ಮಾಡಿದ್ದೆ. ಅದು ತುಂಬಾನೇ ಹಿಟ್ ಆಯ್ತು. ಆಮೇಲೆ ಎಡಿಟರ್ ಆಗಿ ಕೆಲವೊಂದು ಸಿನಿಮಾಗಳನ್ನು ಮಾಡಿದೆ. ಇಲ್ಲಿವರೆಗೆ ಫ್ರೆಂಡ್ಸ್ ಸರ್ಕಲ್ನಲ್ಲೇ ಎಡಿಟರ್ ಆಗಿ ಮಾಡ್ಬೇಕು ಅಂತ ಮಾಡ್ದೆ. ಹಾಗಾಗಿ ಬೇರೆ ಬ್ಯಾನರ್ ಸಿನಿಮಾಗಳನ್ನು ಒಪ್ಲಿಲ್ಲ. ಕಿರಿಕ್ ಪಾರ್ಟಿ ನನ್ನ ಏಳನೇ ಸಿನಿಮಾ.

2.ಸಂಕಲನಕಾರನಾಗಿ ನಿಮಗೆ ಎದುರಾದ ಸವಾಲುಗಳೇನು?
ಸಿಂಪಲ್ಲಾಗ್ ಪ್ರೋಮೊ ನನ್ನ ಮೊದಲ ಕೆಲಸ, ತುಂಬಾ ಇನ್ನೋಸೆಂಟ್ ಆಗಿ ಕೆಲ್ಸ ಮಾಡಿದ್ದೆ, ಭಯ ಇರ್ಲಿಲ್ಲ. ಅದು ಸಕ್ಸಸ್ ಆಗ್ತಿದ್ದಂಗೆ ಜೋಶ್ ನಲ್ಲಿ ಪೂರ್ತಿ ಸಿನಿಮಾನೂ ಎಡಿಟ್ ಮಾಡಿದೆ. ಮುಂದೆ ನನಗೆ ಛಾಲೆಂಜಿಂಗ್ ಅಂತ ಅನ್ಸಿದ್ದು ಬಹುಪರಾಕ್, ಉಳಿದವರು ಕಂಡಂತೆ ಸಿನಿಮಾಗಳನ್ನು ಮಾಡುವಾಗ. ಇವುಗಳು ನಾನ್-ಲೀನಿಯರ್ ಸಿನಿಮಾಗಳಾಗಿದ್ರಿಂದ ಸ್ಕ್ರಿಪ್ಟ್ ಅನ್ನು ಕರೆಕ್ಟಾಗಿ ಕನ್ವೇ ಮಾಡ್ಬೇಕಾಗಿತ್ತು. ರಕ್ಷಿತ್ ಮತ್ತು ಸುನಿಯವರು ಕಂಪ್ಲೀಟ್ ಫ್ರೀಡಂ ಕೊಟ್ಟಿದ್ರಿಂದ ನನಗೆ ಹೆಲ್ಪ್ ಆಯ್ತು.

3.ನೀವು ಸಂಕಲನ ಮಾಡಿರೋ ಸಿನಿಮಾಗಳೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಹೆಸರು ಮಾಡಿವೆ. ಪ್ರತಿಯೊಂದು ಸಿನಿಮಾದಲ್ಲೂ ಹೊಸತನ್ನು ಕೊಡಲು ನಿಮಗೆ ಹೇಗೆ ಸಾಧ್ಯ ಆಯ್ತು?
ಹೊಸತನ ಅನ್ನೋದು ನಾನು ಕೊಟ್ಟ್ಟಿರೋದಲ್ಲ. ಅದಕ್ಕೆ ಇಡೀ ತಂಡ ಕಾರಣ. ಹೊಸತನವಿರುವ, ಹೊಸತಾಗಿ ಯೊಚ್ನೆ ಮಾಡೋ ನಿರ್ದೇಶಕರ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ. ಹೊಸತನದ ಕ್ರೆಡಿಟ್ಸ್ ಏನೇ ಇದ್ರೂ ಅದು ಡೈರೆಕ್ಟರ್ಸ್ಗೆ ಹೋಗ್ಬೇಕು.

4.ಸಂಕಲನದ ಜೊತೆಯಲ್ಲಿ ಕಲರಿಂಗ್, ವಿಎಫ್‌ಎಕ್ಸ್ ನೀವೇ ಮಾಡ್ತೀರಾ ಕಷ್ಟ ಅನಿಸಲ್ವಾ?
ನನಗೆ ವಿಷ್ಯುವಲ್ ಎಫೆಕ್ಟ್ಸ್ ಅಂದ್ರೆ ತುಂಬಾ ಇಷ್ಟ. ವಿಷ್ಯುವಲ್ ಎಫೆಕ್ಟ್ಸ್ ಇರುವಂತಹ ಸಿನಿಮಾಗಳನ್ನು ಮಾಡ್ಬೇಕು ಅಂತಲೇ ನಾನು ಇಂಡಸ್ಟ್ರಿಗೆ ಬಂದಿರೋದು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿನಲ್ಲಿ ವಿಷ್ಯುವಲ್ ಎಫೆಕ್ಟ್ಸ್ ಸಣ್ಣದಾಗಿ ಟ್ರೈ ಮಾಡಿದ್ದೆ. ಸುಮ್ನೆ ಟ್ರೈ ಮಾಡೋಣ ಅಂತ ಮಾಡಿದ್ದೆ. ಅಲ್ಲಿ ಸುನಿ ಫ್ರೀಡಂ ಕೊಟ್ರು. ಹಾಗೇ ಕಲರಿಂಗ್ ಕೂಡ ನನಗೆ ತುಂಬಾ ಇಷ್ಟ. ನಾನು ಕಲರ್ ಥಿಯರಿ ಬಗ್ಗೆ ಓದಿದ್ದೆ. ಕಲರಿಂಗ್ ಕೂಡ ಇಷ್ಯುವಲ್ ಎಫೆಕ್ಟ್ಸ್ನ ಒಂದು ಭಾಗ ಅಂತ ಹೇಳ್ಬಹುದು. ಎಡಿಟಿಂಗ್, ಕಲರಿಂಗ್ ಮತ್ತು ವಿಎಫ್‌ಎಕ್ಸ್ ಪೋಸ್ಟ್ ಪ್ರೊಡಕ್ಷನ್ನಲ್ಲಿ ಒಂದೇ ಸಮಯದಲ್ಲಿ ನಡೆಯೋ ಕೆಲಸಗಳಾಗಿದ್ರಿಂದ ಒತ್ತಡ ಜಾಸ್ತಿ ಇರುತ್ತೆ. ನಾನು ಅಸಿಸ್ಟೆಂಟ್ಗಳನ್ನು ಯೂಸ್ ಮಾಡೋದಿಲ್ಲ. ನಾನು ಮಾಡಿದ ಸಿನಿಮಾಗಳ ನಿರ್ದೇಶಕರು ಟೈಂ ಕೊಟ್ಟಿದ್ರಿಂದ ಚೆನ್ನಾಗಿ ಮಾಡಲು ಸಾಧ್ಯ ಆಯ್ತು.

5.ಸಂಕಲನಕಾರನಾಗಿ ನಿಮಗೆ ಡಿಮ್ಯಾಂಡ್ ಇರುವಾಗಲೇ ನಿರ್ದೇಶನಕ್ಕೆ ಇಳಿದಿದ್ದೀರಾ, ಏನ್ ವಿಷ್ಯಾ?
ನಾನು ನಿರ್ದೇಶಕ ಆಗುವ ಕನಸನ್ನು ಇಟ್ಟುಕೊಂಡು ಬಂದವನು. ನಾನು ಮಾಡೋ ಸಿನಿಮಾನ ಎಡಿಟ್ ಮಾಡ್ಬೇಕು ಅಂತಾನೇ ಎಡಿಟಿಂಗ್ ಕಲ್ತಿರೋದು. ಎಡಿಟಿಂಗ್ನಲ್ಲಿ ತುಂಬಾನೇ ಅವಕಾಶಗಳು ಬರ್ತಿವೆ, ಆದ್ರೆ ನಾನು ಮೊದಲೇ ಡಿಸೈಡ್ ಮಾಡಿದ್ದೆ. 4-5 ವರ್ಷಗಳಲ್ಲಿ ನಾನೊಂದು ಸಿನಿಮಾ ನಿರ್ದೇಶನ ಮಾಡ್ಬೇಕು ಅಂತ. ಆ ಟೈಂ ಇವಾಗ ಬಂದಿದೆ. ಇದು ಸರಿಯಾದ ಸಮಯ ಅಂತ ಅನಿಸ್ತಿದೆ.

6.ನಿಮ್ಮ ನಿರ್ದೇಶನದ ಸಿನಿಮಾ ಯಾವಾಗ ಶುರು? ತಂಡದ ಬಗ್ಗೆ ಸ್ವಲ್ಪ ಹೇಳಿ.
ಪೂರ್ವ ತಯಾರಿಗಳು ನಡೆಯ್ತಿವೆ. ಸ್ಕ್ರಿಪ್ಟ್ ಫೈನಲ್ ಸ್ಟೇಜ್ಗೆ ಬಂದಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಅನೌನ್ಸ್ ಮಾಡ್ತೀವಿ. ಟೀಂ ಬಗ್ಗೆ ಹೇಳ್ಬೇಕು ಅಂದ್ರೆ ರಕ್ಷಿತ್ ಅವರು ಹೀರೋ, ಮತ್ತು ಸಾನ್ವಿ ಶ್ರೀವಾತ್ಸವ್ ಹೀರೋಯಿನ್. ಚರಣ್ರಾಜ್ ಮ್ಯೂಸಿಕ್, ಮನೋಹರ್ ಜೋಶಿ ಅವರು ಛಾಯಾಗ್ರಹಣ ಮಾಡ್ತಿದ್ದಾರೆ. ಉಳಿದ ಡೀಟೇಲ್ಸ್ ಸ್ವಲ್ಪ ದಿನದಲ್ಲೇ ಕೊಡ್ತೇನೆ.

7.ನಿಮ್ಮ ಸಿನಿಮಾದಲ್ಲಿ ಹೊಸದಾಗಿ ಏನನ್ನು ಹೇಳಲು ಹೊರಟಿದ್ದೀರಾ?
ಪ್ರತಿಯೊಬ್ಬ ನಿರ್ದೇಶಕನಿಗೂ ತನ್ನ ಮೊದಲ ಸಿನಿಮಾದಲ್ಲಿ ಹೊಸದಾಗಿ ಏನೋ ಹೇಳ್ಬೇಕು ಅನ್ನೋ ಆಸೆ ಇರುತ್ತೆ. ಹಾಗೇ ನನಗೂ ಕೂಡ. ನಾನು ಮಾಡೋ ಸಿನಿಮಾ ಡಿಫರೆಂಟ್ ಫಿಲ್ಮ್ ಅಂತ ಹೇಳಲ್ಲ ಬಟ್ ಖಂಡಿತವಾಗಿಯೂ ಇದು ರೆಗ್ಯುಲರ್ ಸಿನಿಮಾ ಅಂತ ಆಗಿರಲ್ಲ. ನಿರೂಪಣೆಯಲ್ಲಿ ಹೊಸತನವಿದೆ. ವಿಷ್ಯವಲ್ಸ್ ಚೆನ್ನಾಗಿ ಇರುತ್ತೆ. ಟೆಕ್ನಿಕಲಿ ರಿಚ್ ಮತ್ತು ಸ್ಟ್ರಾಂಗ್ ಆಗಿರುತ್ತೆ ಸಿನಿಮಾ. ಕಥೆ ಸಿಂಪಲ್, ಆದರೆ ಹೇಳೋ ರೀತಿಯಲ್ಲಿ ಹೊಸತನವಿರುತ್ತೆ. ಇದೊಂದು ಮ್ಯೂಸಿಕಲ್ ಫಿಲ್ಮ್ ಅಂತ ಹೇಳ್ಬಹುದು. ವಿಷ್ಯುವಲ್ಸ್ ಮತ್ತು ಮ್ಯೂಸಿಕ್ನಲ್ಲಿ ಹೊಸ ಪ್ರಯೋಗ ಮಾಡ್ಬೇಕು ಅಂತ ಇದ್ದೇವೆ.



Mug Dhokla Chaat | #MugRecipes | Sanjeev Kapoor Khazana

I hope it doesn’t trigger anyone that we’ve put the most-loved Dhokla and Chaat in a mug. Yes, that’s a real thing, and yes, it’s even bette...